ಜ್ಯೋತಿರ್ಧ್ಯಾನದಿಂದ ಮನಸ್ಸು, ಆತ್ಮ ಶುದ್ಧಿ

19 ckm 5
ಚಿಕ್ಕಮಗಳೂರು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಉತ್ತರಕರ್ನಾಟಕ ವಿಭಾಗದಿಂದ ನಗರದ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಭಾಗಮಟ್ಟದ ಜಿಲ್ಲಾ ಸಮೂಹ ಭಜನೆ ಹಾಗೂ ಜ್ಯೋತಿರ್ಧ್ಯಾನ ಕಾರ್ಯಾಗಾರ ನಡೆಯಿತು. ಸುರೇಶ ಶೆಟ್ಟಿ, ಬಿ.ಪಿ.ಶಿವಮೂರ್ತಿ, ಟಿ.ಪಿ.ಭೋಜೇಗೌಡ, ಎಂ.ಆರ್.ನಾಗರಾಜ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜ್ಯೋತಿರ್ಧ್ಯಾನ ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಎಂದು ಎಸ್‌ಎಸ್‌ಎಸ್‌ಎಸ್‌ಓ ರಾಜ್ಯ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸಂಚಾಲಕ ಸುರೇಶ ಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಉತ್ತರಕರ್ನಾಟಕ ವಿಭಾಗದಿಂದ ನಗರದ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಭಾಗಮಟ್ಟದ ಜಿಲ್ಲಾ ಸಮೂಹ ಭಜನೆ ಹಾಗೂ ಜ್ಯೋತಿರ್ಧ್ಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜೀವನವನ್ನು ಶುದ್ಧೀಕರಿಸಲು ಶ್ರೀಸತ್ಯಸಾಯಿ ಬಾಬಾ ಅವರು ಒಂಭತ್ತು ನೀತಿಸಂಹಿತೆಯನ್ನು ಹೇಳಿದ್ದಾರೆ. ತಲಾಮೂರು ಅಂಶ ಭಕ್ತಿಯೋಗ-ಕರ್ಮಯೋಗ-ಧ್ಯಾನಯೋಗದÀಲ್ಲಿ ಪ್ರಪ್ರಥಮವಾದz್ದೆÃ ಧ್ಯಾನ. ಜ್ಯೋತಿಯನ್ನು ಮುಂದಿಟ್ಟುಕೊAಡು ನಮ್ಮೊಳಗಿನ ಏಳುಚಕ್ರಗಳಲ್ಲಿ ತಂದುಕೊAಡು ಧ್ಯಾನ ಮಾಡುವುದು ಹೆಚ್ಚು ಪರಿಣಾಮಕಾರಿ ಎಂದರು.
ಶ್ರದ್ಧೆ ಮತ್ತು ವಿಶ್ವಾಸ ಇದ್ದರೆ ಧ್ಯಾನ ಸಿದ್ಧಿಸುತ್ತದೆ. ಪ್ರಶಾಂತವಾದ ಮನಸ್ಸು ಜಗತ್ತಿನ ಅತಿದೊಡ್ಡ ಸಂಪತ್ತು. ಸುಖಾಸನ ಧ್ಯಾನ ಸೂಕ್ತ. ಧ್ಯಾನ ಮತ್ತು ಪ್ರಾರ್ಥನೆ ಭಗವಂತನ ಕಡೆಗೆ ಕರೆದೊಯ್ಯುತ್ತವೆ. ಮನಸ್ಸಿನ ಬಿರುಗಾಳಿ ಧ್ಯಾನದಲ್ಲಿ ಶಾಂತವಾಗುತ್ತದೆ. ಮಾತು ಮಂತ್ರವಾಗಿ ಮಾಣಿಕ್ಯವಾಗುವುದು ಅಗತ್ಯ ಎಂದರು.
ಧ್ಯಾನದ ಅಂತಿಮ ಸ್ಥಿತಿ ಸಮಾಧಿ. ಅಂದರೆ ಸಮಚಿತತ್ತೆ. ಹೊಗಳಿಕೆ-ತೆಗಳಿಕೆ, ಸುಖ-ದುಃಖಗಳಿಗೆ ವಿಚಲಿತವಾಗದ ಸ್ಥಿತಿ ಅದು. ಧ್ಯಾನ ಇಂದ್ರಿಯಾತೀತಾ ಸ್ಥಿತಿ ಆತ್ಮದ ಭಾಷೆಯೂ ಹೌದು. ಆಧ್ಯಾತ್ಮಿಕ ಪ್ರಯಾಣದ ಆರಂಭವೇ ಧ್ಯಾನ ಎಂದು ಬಣ್ಣಿಸಿದರು.
ಸಂತೋಷಭರಿತ ಜೀವನಕ್ಕಾಗಿ ಧ್ಯಾನ ಮತ್ತು ಧಾನ್ಯ ಅವಶ್ಯಕ. ಧ್ಯಾನದಿಂದ ಮನಸ್ಸು ಮತ್ತು ಆತ್ಮ ಸುಸ್ಥಿರವಾದರೆ, ಧಾನ್ಯದಿಂದ ದೇಹಾರೋಗ್ಯ ಸುಸ್ಥಿರಗೊಳ್ಳುತ್ತದೆ. ಧ್ಯಾನ ಮನಸ್ಸಿನ ಶಾಂತಿಯ ಕೀಲಿಕೈ. ಮನಸ್ಸಿನ ಔಷಧ ಮತ್ತು ಆತ್ಮದ ಆಹಾರ. ನಮ್ಮನ್ನು ನಾವು ಕಂಡುಕೊಳ್ಳುವ ದಾರಿ ಜ್ಯೋತಿರ್ಧ್ಯಾನ. ಜ್ಯೋತಿ ಸದಾ ಉರ್ಧ್ವಮುಖಿ. ಒಂದು ಜ್ಯೋತಿಯಿಂದ ಸಾವಿರಾರು ದೀಪ ಬೆಳಗಿದರೂ ಅದರ ಬೆಳಕು ಕಡಿಮೆಯಾಗುವುದಿಲ್ಲ. ಕತ್ತಲೆಯನ್ನು ತೊಡೆದು ಬೆಳಕು ನೀಡುವ ಜ್ಞಾನ ಸಂಕೇತಿಸುತ್ತದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಸತ್ಯಸಾಯಿ ಸೇವಾಸಂಸ್ಥೆಗಳ ಅಧ್ಯಕ್ಷ ಬಿ.ಪಿ.ಶಿವಮೂರ್ತಿ ಮಾತನಾಡಿ, ದೈವೀಕತೆಯ ಅರಿವು ಮೂಡಿಸುವುದು ಹಾಗೂ ಆಧ್ಯಾತ್ಮ ಪ್ರಗತಿಗೆ ವಾತಾವರಣ ಮೂಡಿಸುವುದು ಸಮಿತಿಯ ಉz್ದÉÃಶ. ಸಾಧಕನಿಗಿದು ಉತ್ತಮ ಕ್ಷೇತ್ರ. ಭಗವಂತನ ನಾಮಸ್ಮರಣೆಗೆ ಅಚಲ ಶ್ರದ್ಧೆ ಅಗತ್ಯ. ಜ್ಞಾನಾಗ್ನಿ ಬೆಳೆಗೆ ಸರ್ವ ಪಾಪನಾಶ ಮಾಡುವ ಶಕ್ತಿ ಇದೆ ಎಂದು ಹೇಳಿದರು.
ಸಂಗೀತ ವಿದ್ವಾಂಸರಾದ ಕುಮಟಾದ ಸಾಯಿತೇಜಸ್, ಹೊನ್ನಾವರದ ಮೋಹಿತಶೇಟ್, ಹಾಸನದ ಪ್ರಭಾಕರ ರಾಗ-ತಾಳ-ಭಾವದೊಂದಿಗೆ ಸ್ವಾಮಿ ಭಜನೆಯ ತರಬೇತಿ ನೀಡಿದರು.
ಚಿಕ್ಕಮಗಳೂರು ಶ್ರೀಸತ್ಯಸಾಯಿ ಜಿಲ್ಲಾ ಸೇವಾಸಮಿತಿ ಸಂಚಾಲಕ ಟಿ.ಪಿ.ಭೋಜೇಗೌಡ, ಸೇವಾಕ್ಷೇತ್ರದ ಅಧ್ಯಕ್ಷ ಎಂ.ಆರ್.ನಾಗರಾಜ್, ಜಿಲ್ಲಾಸೇವಾಸಮಿತಿ ಸಂಯೋಜಕ ವೆಂಕಟೇಶ್, ಜಿಲ್ಲಾ ಯುವ ಸಂಯೋಜಕ ರವಿ, ಹಾಸನ ಜಿಲ್ಲಾಧ್ಯಕ್ಷ ನಾಗರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net