

ನರಗುಂದ: ಮತಿಯು ಸುಸ್ಥಿರದಲ್ಲಿದ್ದರೆ ಜೀವನ ಸುಂದರಮಯವಾಗಿರುತ್ತದೆ. ಸಣ್ಣ, ಪುಟ್ಟ ಚಿಂತನೆಗಳು ಮನುಷ್ಯನ ಜೀವನವನ್ನು ನಕಾರಾತ್ಮಕದೆಡೆಗೆ ಕೊಂಡೊಯ್ಯುತ್ತವೆ. ಶರಣರ ಹಿತ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬಾಳನ್ನು ಯಶಸ್ಸಿನ ದಿಕ್ಕಿನೆಡೆಗೆ ಸಾಗುತ್ತದೆ ಎಂದು ರೋಟರ‌್ಯಾಕ್ಟ್ ಶಾಲೆ ಮುಖ್ಯೋಪಾಧ್ಯಾಯ ಪಿ.ವಿ. ಕೆಂಚನಗೌಡ್ರ ಹೇಳಿದರು.
ಪಟ್ಟಣದ ಶ್ರೀಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ, ಶ್ರೀಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶರಣ ಸಂಗಮ-8ರ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ನಮ್ಮ ಅಂಧತ್ವ ನಿವಾರಣೆಯಾಗಲು ಶರಣರು ನೀಡಿದ ಮಹಾ ಆದರ್ಶಗಳನ್ನು ನಾವೆಲ್ಲ ಬಾಳಿನಲ್ಲಿ ಅಳವಡಿಸಿಕೊಳ್ಳಬೇಕು. ಯುವಕರಲ್ಲಿ ಸಂಸ್ಕಾರ ಬೆಳೆಯಬೇಕು. ಮೊಬೈಲ್ ಗೀಳಿನಿಂದ ಮಕ್ಕಳನ್ನು ದೂರವಿಡಬೇಕು’ ಎಂದು ತಿಳಿಸಿದರು.
ಬಸವ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಮಾನವನ ಜೀವನ ಯಶಸ್ವಿಯಾಗಲು ಶರಣರ ಚಿಂತನೆ ಅಗತ್ಯ. ಜಗಜ್ಯೋತಿ ಬಸವಣ್ಣನವರು ಹಲವಾರು ಶಿವ-ಶರಣರು ನೀಡಿದ ವಚನಗಳ ಸಾರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪಣಜಿಯಲ್ಲಿ ಇತ್ತೀಚೆಗೆ ನಡೆದ 55ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕಿನ ಕೊಣ್ಣೂರ ಜೈಕಿಸಾನ ಕಲಾ ತಂಡದ ಸದಸ್ಯರು, ಶಂಕ್ರಣ್ಣ ವಾಳದ, ಪಿ.ವಿ. ಕೆಂಚನಗೌಡ್ರ ಅವರನ್ನು ಬಸವ ಕೇಂದ್ರದಿಂದ ಸನ್ಮಾನಿಸಲಾಯಿತು. ಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ ಧರ್ಮಾಧಿಕಾರಿ ಎಸ್.ವಿ. ಗೋವೇಶ್ವರ, ಬಿ.ಎಚ್. ಕ್ಯಾರಕೊಪ್ಪ ಮತನಾಡಿದರು.
ಪ್ರಕಾಶ ಚಂದನ್ನವರ, ಚನ್ನಪ್ಪ ಮ್ಯಾಗಿಲಮನಿ, ಪಡಿಯಪ್ಪ ಕಡ್ಲಿ, ಕರಿಯಪ್ಪ ಚಂದನ್ನವರ, ಶಂಕರ ಕಡ್ಲಿ, ಬಾಬು ಬಾರಕೇರ, ಸಾವಿತ್ರಿ ಹುಜರತ್ತಿ, ಗೀತಾ ಚಂದನ್ನವರ, ಎಸ್.ವೈ.ಹುಂಬಿ,ಬಸವರಾಜ ಗೋವೇಶ್ವರ, ಜೆ.ಆರ್.ಕದಂ, ಎಸ್.ಬಿ.ಭಜಂತ್ರಿ, ಆರ್.ಬಿ.ಚಿನಿವಾಲರ, ಸಿ.ಎಚ್.ಕೋರಿ. ವಿ.ಎನ್. ಕೊಳ್ಳಿಯವರ, ಕಲಾವತಿ ಹಾದಿಮನಿ, ರೇಣುಕಾ ಶ್ರೀರಾಮನಗರ, ಉಪಾಸಿ, ಮನೋಹರ ಹುಯಿಲಗೋಳ, ಈರಣ್ಣ ಕೋರಿ, ಪತ್ರೆಪ್ಪ ಹಡಪದ, ಶೋಭಾ ಕುಪ್ಪಸ್ತ, ಶಾಂತವ್ವ ಪವಾಡಿ, ಸಂಗಪ್ಪ ಪೂಜಾರ ಉಪಸ್ಥಿತರಿದ್ದರು. ಕೆ.ಎನ್.ಹದಗಲ್ ವಚನ ಸಂಗೀತ ಪ್ರಸ್ತುತಪಡಿಸಿದರು. ಶಿವಯೋಗಿ ಹೆಗಡಾಳ ನಿರೂಪಿಸಿದರು.