ವಚನಗಳ ಪಾಲನೆಯಿಂದ ಜೀವನ ಪಾವನ

Purification of life by keeping vows
ಮುದ್ದೇಬಿಹಾಳದ ಎಂಜಿವಿಸಿ ಬಿಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಡಾ. ಸತೀಶ ಜಿಗಜಿನ್ನಿ ಮಾತನಾಡಿದರು. ಡಾ. ಚಂದ್ರಕಾಂತ ಬಂಡರಗಲ್ಲ, ಅಶೋಕ ತಡಸದ, ವಿದ್ಯಾವತಿ ಅಂಕಲಗಿ, ಕಾಶಿಬಾಯಿ ರಾಂಪೂರ ಇದ್ದಾರೆ.
Published on

ಮುದ್ದೇಬಿಹಾಳ: ಪಾಲಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬೇಕು ಎಂದು ಬಿಎಲ್​ಡಿಇ ಡೀಮ್ಸ್​ ವಿವಿ ವಿಶ್ರಾಂತ ಕುಲಪತಿಯೂ ಆದ ಎಸ್​ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್​ ಅಧ್ಯ ಡಾ. ಸತೀಶ ಜಿಗಜಿನ್ನಿ ಹೇಳಿದರು.

ಪಟ್ಟಣದ ಎಸ್​ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್​ನ ಎಂಜಿವಿಸಿ ಶಿಣ ಮಹಾವಿದ್ಯಾಲಯದಲ್ಲಿ ಲಿಂ. ವಾಸಂತಿಬಾಯಿ, ಲಿಂ. ಡಾ. ಸಿದ್ಧವಿರಪ್ಪ ಜಿಗಜಿನ್ನ ಸ್ಮರಣಾರ್ಥ ತಾಲೂಕು ಶರಣ ಸಾಹಿತ್ಯ ಪರಿಷತ್​ ವತಿಯಿಂದ ಸೋಮವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದರು.

ಶರಣರ ವಚನಗಳಲ್ಲಿ ಕಾನೂನು ವಿಷಯದ ಕುರಿತು ನ್ಯಾಯವಾದಿ ವಿದ್ಯಾವತಿ ಅಂಕಲಗಿ ಮಾತನಾಡಿ, ಶರಣ, ಶರಣೆಯರ ವಚನಗಳಲ್ಲಿ ಇಂದಿನ ಕಾನೂನಿನ ಅರ್ಥಗಳು ಅಡಗಿವೆ. ವಚನಗಳ ಪಾಲನೆ ಎಂದರೆ ಅದು ಕಾನೂನಿನ ಪಾಲನೆ ಇದ್ದಂತೆ ಎಂದರು.

ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನೀಲ ಕುಮಾರ ಶೇಗುಣಸಿ ಮಾತನಾಡಿ, ನ್ಯಾಯ, ನೀತಿ, ಧರ್ಮದ ತಳಹದಿ ಪಸರಿಸುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್​ ಮಾಡುತ್ತಿದೆ ಎಂದರು.

ಸಂಸ್ಥೆ ಆಡಳಿತಾಧಿಕಾರಿ ಪ್ರೊ. ಎ.ಬಿ. ಕುಲಕರ್ಣಿ, ಎಂಜಿವಿಸಿ ಬಿಎಡ್​ ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಕಾಂತ ಬಂಡರಗಲ್ಲ, ನ್ಯಾಯವಾದಿ ಅಯ್ಯಣ್ಣ ಕಡಿ, ಕದಳಿ ವೇದಿಕೆ ಅಧ್ಯೆ ಕಾಶಿಬಾಯಿ ರಾಂಪೂರ, ಎಂ.ಎಸ್​. ಬಿರಾದಾರ. ಎಸ್​.ಐ. ಗೌಡರ, ಬಸವರಾಜ ಲಿಂಗದಳ್ಳಿ, ಸಂಗಣ್ಣ ಕಟ್ಟಿ, ಸಂಗಮೇಶ ಶಿವಣಗಿ, ಎಸ್​.ಎಚ್​. ಪಾಟೀಲ, ಎಸ್​.ಎಸ್​. ಕಲ್ಯಾಣಿ, ಸಂಗಣ್ಣ ಚಿನಿವಾರ, ದಾನು ಅಂಗಡಿ, ಮಹಾದೇವಿ ನಾಲತವಾಡ, ಮಹಾದೇವಿ ವಾಲಿ, ಅನ್ನಪೂರ್ಣ ಕಿತ್ತೂರ, ರೇಣುಕಾ ಹಳ್ಳೂರ, ಸುಜಾತಾ ಕರಡ್ಡಿ, ಪ್ರೊ. ಎಸ್​.ಜಿ. ನಂದಿ, ಪ್ರೊ. ಎನ್​.ಬಿ. ಚೌಡಾಪೂರ, ಪ್ರೊ. ವಾಲಪ್ಪ ಲಮಾಣಿ, ಎಸ್​.ಎಸ್​. ಹುನಗುಂದ, ಎಚ್​.ಡಿ. ನದಾ ಇದ್ದರು.

ಎಸ್​ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್​ ಕಾರ್ಯದರ್ಶಿ ಅಶೋಕ ತಡಸದ ಬಸವ ಭಾವಪೂಜೆ ನೆರವೇರಿಸಿದರು. ಮಂಜುಳಾ ದೊಡಮನಿ, ಜ್ಯೋತಿ ಬಡಿಗೇರ ಪ್ರಾರ್ಥಿಸಿದರು. ರುದ್ರೇಶ ಕಿತ್ತೂರ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಎಸ್​.ಜಿ. ನಾಗರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್​.ಟಿ. ಗೌಡರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕೋರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net