ಚೈತ್ರಾ ಭಾಷಣ ಮಾಡಿದ ಸ್ಥಳ ಶುದ್ಧೀಕರಣ

Kopp ccc
ಚೈತ್ರಾ ಕುಂದಾಪುರ ಬಂಧನ ಹಿನ್ನೆಲೆಯಲ್ಲಿ ಮಾವಿನಕಟ್ಟೆ ಶ್ರೀ ಆನೆವಿಘ್ನೇಶ್ವರ ಸ್ವಾಮಿ, ಬ್ರಹ್ಮ ಜಟಿಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಕಾಯಿ ಒಡೆದು ಪೂಜೆ ಸಲ್ಲಿಸಿದರು. ಕೆ.ಜಿ ಶೋಭಿಂತ್, ಮೀಗಾ ಜಗದೀಶ್, ಪ್ರವೀಣ್ ಬೆಳ್ಳಾಲೆ, ನವೀನ್ ಮಾವಿನಕಟ್ಟೆ ಇತರರಿದ್ದರು.
Published on

ಕೊಪ್ಪ: ಚುನಾವಣೆ ಪೂರ್ವದಲ್ಲಿ ಸ್ಥಳೀಯ ಗಣಪತಿ ವಿಷಯದಲ್ಲಿ ಎರಡು ಗುಂಪುಗಳ ನಡುವೆ ವೈಮನಸ್ಯ ಉಂಟಾದಾಗ ಚೈತ್ರಾ ಕುಂದಾಪುರ ಒಂದು ಗುಂಪಿನ ಪರವಾಗಿ ಭಾಷಣ ಮಾಡಿದ್ದರು. ಹಾಗಾಗಿ ಕೆಲ ಸ್ಥಳೀಯರು, ಕಾಂಗ್ರೆಸ್ ಮುಖಂಡರು ಭಾನುವಾರ ಸ್ಥಳ ಶುದ್ಧೀಕರಣ ಮಾಡಿದ್ದಾರೆ.

ಕಳೆದ ವರ್ಷ ಶಾನುವಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆಗ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಒಂದು ಗುಂಪು ಚೈತ್ರಾ ಕುಂದಾಪುರ ಅವರನ್ನು ಕರೆಸಿ ಭಾಷಣ ಮಾಡಿಸಿತ್ತು. ಕಾರ್ಯಕ್ರಮದಲ್ಲಿ ಅಂದಿನ ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಮಾಜಿ ಸಚಿವ ಡಿ.ಎನ್.ಜೀವರಾಜ್ ಭಾಗಿಯಾಗಿದ್ದರು.
ಸಹಬಾಳ್ವೆ ನಡೆಸಿ ನೆಮ್ಮದಿಯಿಂದ ಇದ್ದ ಗ್ರಾಮಕ್ಕೆ ಚೈತ್ರಾ ಕುಂದಾಪುರ ಆಗಮಿಸಿ ಹಿಂದುಗಳ ವಿರುದ್ಧ ಹಿಂದುಗಳನ್ನೇ ಎತ್ತಿಕಟ್ಟುವ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಒಂದು ಗುಂಪು ದೇವರ ಮೊರೆ ಹೋಗಿತ್ತು.
ಈಗ ಒಂದು ವರ್ಷದೊಳಗೇ ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವುದರಿಂದ ಮಾವಿನಕಟ್ಟೆಯ ಕೆಲ ಗ್ರಾಮಸ್ಥರು ಗ್ರಾಮದ ಶ್ರೀ ಆನೆವಿಘ್ನೇಶ್ವರ ಸ್ವಾಮಿ, ಬ್ರಹ್ಮಜಟಿಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಚೈತ್ರಾ ಕುಂದಾಪುರ ಭಾಷಣ ಮಾಡಿದ ಜಾಗಕ್ಕೆ ತೀರ್ಥಪ್ರೋಕ್ಷಣೆ ಮಾಡಿದರು.
ಸ್ಥಳೀಯರಾದ ಕೆ.ಜಿ.ಶೋಭಿಂತ್, ಮೀಗಾ ಜಗದೀಶ್, ಕೆ.ಟಿ.ಮಿತ್ರ, ಪ್ರವೀಣ್ ಶಾನುವಳ್ಳಿ, ಪ್ರವೀಣ್ ಬೆಳ್ಳಾಲೆ, ಶಿವಾಕರ್ ಶೆಟ್ಟಿ, ನವೀನ್ ಮಾವಿನಕಟ್ಟೆ, ಅತಿ, ನವೀನ್ ಕರುವಾನೆ, ಕೆ.ಪಿ.ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net