ನಿಜ ದಾರಿ ತೋರಿಸುವುದು ಶುದ್ಧ ಸಾಹಿತ್ಯ

1sdp2 BHAJANE
Published on

ಸಿದ್ದಾಪುರ: ವಿಶ್ವದ ಬಹುಭಾಗಗಳಲ್ಲಿ ನಾಗರಿಕತೆ ಬೆಳೆದಿರದ ಸಂದರ್ಭದಲ್ಲಿ ಭಾರತದಲ್ಲಿ ರಾಮಾಯಣ, ಮಹಾಭಾರತಗಳಂಥ ಅವಿನಾಶಿ ಸಾಹಿತ್ಯ ರಚಿಸಲ್ಪಟ್ಟವು. ಸಾವಿರಾರು ವರ್ಷ ವಿದೇಶಿಗರ ಆಕ್ರಮಣ ನಡೆದರೂ ಭಾರತವನ್ನು ಭದ್ರವಾಗಿಸಿದ್ದು ಇಂಥ ಸಾಹಿತ್ಯ. ಸಮಾಜ, ವ್ಯಕ್ತಿ ದಿಕ್ಕು ತಪ್ಪಿದಾಗ ನಿಜವಾದ ದಾರಿ ತೋರಿಸುವುದು ಶುದ್ಧ ಸಾಹಿತ್ಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್​ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರು ಹೇಳಿದರು.

ಪಟ್ಟಣದ ರಾಘವೇಂದ್ರಮಠದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್​ನ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಶ್ರೀರಾಮ ಭಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿ ಜಯವಂತ ಪದ್ಮನಾಭ ಶಾನಭಾಗ ಮಾತನಾಡಿ, ನೂರು ವರ್ಷಗಳ ಹೊಸ್ತಿಲಲ್ಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಘಟನೆ ಎಲ್ಲೆಡೆ ಗಟ್ಟಿಯಾಗಿ ಬೆಳೆಯಬೇಕು ಎಂದರು.

ಪರಿಷದ್​ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ, ಸಹೃದಯರಿಂದ ಸಾಹಿತ್ಯ ಕ್ಷೇತ್ರ ಬೆಳೆಯುತ್ತದೆ. ಮಾನವೀಯ ಮತ್ತು ಹಾರ್ದಿಕ ಸಂಬಂಧ ಬೆಳೆಸುವ, ಬೆಸೆಯುವ ಕಾರ್ಯ ಸಾಹಿತ್ಯ ಸಂಘಟನೆಯಿಂದ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಭಾಸಾಪದ ಶಿರಸಿ ಜಿಲ್ಲೆ ಅಧ್ಯಕ್ಷ ಗಂಗಾಧರ ಕೊಳಗಿ, ಸಾಹಿತಿಯ ಜವಾಬ್ದಾರಿ ಕೇವಲ ಬರವಣಿಗೆಗೆ ಸೀಮಿತವಲ್ಲ. ಠೊಳ್ಳು ಸಿದ್ಧಾಂತಗಳಿಗಿಂತ ಸಮಾಜದ, ದೇಶದ ಉನ್ನತಿ ಸಾಹಿತ್ಯಕ್ಕೆ ಮುಖ್ಯವಾಗಬೇಕು ಎಂದರು.

ಅಭಾಸಾಪದ ರಾಜ್ಯ ಸಮಿತಿ ಆಮಂತ್ರಿತ ಸದಸ್ಯ ಜಗದೀಶ ಭಂಡಾರಿ ಮಾತನಾಡಿದರು. ಅಭಾಸಾಪದ ಶಿರಸಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಪ್ರಕಾಶ ಭಾಗ್ವತ, ಇತರರು ನಿರ್ವಹಿಸಿದರು.

ಪ್ರತಿಜ್ಞಾವಿಧಿ ಸ್ವೀಕಾರ: ತಾಲೂಕು ಸಮಿತಿ ಅಧ್ಯಕ್ಷರಾಗಿ ಆರ್.ಎನ್. ಹಳಕಾರ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ ಬೆಂಗ್ರೆ, ಸಹಕಾರ್ಯದರ್ಶಿಯಾಗಿ ವೀಣಾ ಆನಂದ ಶೇಟ್, ಖಜಾಂಚಿಯಾಗಿ ನಿತಿನ್​ಕುಮಾರ ಭಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ, ಕುಮಾರ ಪೋಕಳೆ, ಮಹಿಳಾ ಪ್ರಮುಖ್, ಜ್ಯೋತಿ ವಿ. ಹೆಗಡೆ, ಸಂಘಟನಾ ಪ್ರಮುಖನಾಗಿ ದಿವಾಕರ ನಾಯ್ಕ, ಮಾಧ್ಯಮ ಪ್ರಮುಖನಾಗಿ ಸಂತೋಷ ಹುಲೇಕಲ್, ಸದಸ್ಯರಾಗಿ ಐ.ಕೆ. ನಾಯ್ಕ ನಾಗರಕಟ್ಟೆ, ಮಂಜುನಾಥ ನಾಯ್ಕ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net