ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ

IMG_20250306_225346.jpg
Published on

ಚಿಕ್ಕಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯು ಮಾ.3 ರಿಂದ ಪ್ರಾರಂಭವಾಗಿದೆ.
ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ೬ ತಾಲೂಕುಗಳಲ್ಲೂ ಸ್ಥಾಪಿಸಲಾಗಿದ್ದ ಕೇಂದ್ರಗಳಲ್ಲಿ ಕಳೆದ ಮುಂಗಾರು ಅವಧಿಯಲ್ಲಿನ ರಾಗಿ ಬೆಳೆದಿರುವ ೭,೨೩೧ ರೈತರು ನಿಯಮಾನುಸಾರ ಅಗತ್ಯ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈಗ ಇವರಿಂದ ೧,೦೮,೮೨೭ ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುತ್ತಿದೆ.  ಡಿ.೧ ರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇನ್ನೂ ಜ.೧ ರಿಂದ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕಾಗಿತ್ತು. ಆದರೆ, ಗೋಣಿ ಚೀಲಗಳ ಖರೀದಿ, ಗುಣಮಟ್ಟ ಪರಿಶೀಲನೆ ಸೇರಿದಂತೆ ನಾನಾ ನೆಪದಲ್ಲಿ ವಿಳಂಬ ಮಾಡಿದ್ದು ಮನೆಗಳಲ್ಲಿ ರಾಗಿ ಉತ್ಪನ್ನವನ್ನು ದಾಸ್ತಾನಿಟ್ಟುಕೊಂಡು ತೊಂದರೆ ಅನುಭವಿಸುವಂತಾಗಿತ್ತು. ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಸರ್ಕಾರವು ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.


*ಕೇಂದ್ರಗಳನ್ನು ಸಂಪರ್ಕಿಸಿ
ಈಗಾಗಲೇ ಪ್ರಾರಂಭವಾಗಲಿರುವ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಜಿಲ್ಲಾಡಳಿತವು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ರೈತರು ಖರೀದಿ ಏಜೆನ್ಸಿಯಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ತಾಲೂಕು ಖರೀದಿ ಅಧಿಕಾರಿಗಳನ್ನು ಸಂಪರ್ಕಿಸಬಹುದೆAದು ಮನವಿ ಮಾಡಿದೆ.


*ಕ್ವಿಂಟಾಲ್‌ಗೆ ದರ ನಿಗದಿ
ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ, ಭತ್ತ ಹಾಗೂ ಜೋಳವನ್ನು ಖರೀದಿಸಲಾಗುತ್ತದೆ. ಅದರಂತೆ ಕ್ವಿಂಟಾಲ್‌ಗೆ ದರ ರಾಗಿಗೆ ೪೨೯೦ ರೂ, ಭತ್ತಕ್ಕೆ (ಸಾಮಾನ್ಯ) ೨೩೦೦ ರೂ, ಭತ್ತಕ್ಕೆ (ಗ್ರೇಡ್ ಎ) ೨೩೨೦ ರೂ, ಜೋಳಕ್ಕೆ ೩,೩೭೧ ರೂ. ದರ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net