

ಹುಕ್ಕೇರಿ: ರೈತರು ಬೆಳೆದ ಕಬ್ಬನ್ನು ನಿಗದಿತ ಅವಧಿಯೊಳಗೆ ತರಲು ತೋಡ್ನಿ ಗ್ಯಾಂಗ್ ಹೆಚ್ಚಿಸಲಾಗಿದ್ದು, ಗುಣಮಟ್ಟದ ಕಬ್ಬನ್ನು ವಿಶ್ವರಾಜ ಶುಗರ್ ಇಂಡಸ್ಟ್ರೀಜ್ ಗೆ ಕಳುಹಿಸಿ ಸಹಕರಿಸುವಂತೆ ವಿಶ್ವರಾಜ ಶುಗರ್ಸ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪೃಥ್ವಿ ಕತ್ತಿ ತಿಳಿಸಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಜ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಪ್ರಾರಂಭೋತ್ಸವ ಪೂಜೆ ಸಮಾರಂಭ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಇತರ ಕಾರ್ಖಾನೆಗಳು ನೀಡುವ ಬೆಲೆ ಹಾಗೂ ಸರ್ಕಾರ ನಿಗದಿಪಡಿಸಿದ ಎಫ್ಆರ್‌ಪಿ ದರದಂತೆ ಕಾರ್ಖಾನೆ ಬೆಲೆ ನೀಡುವುದಾಗಿ ತಿಳಿಸಿದರು. ಪ್ರತಿ ವರ್ಷದಂತೆ ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಳುಹಿಸುವಂತೆ ವಿನಂತಿಸಿದರು.
ಕಾರ್ಖಾನೆ ಪೂರ್ಣಾವಧಿ ನಿರ್ದೇಶಕ ಮಲ್ಲಿಕಾರ್ಜುನ ಪೂಜಾರಿ, ಎಸ್.ಬಿ.ಪಾಟೀಲ, ಶೇಷಗಿರಿ ಕುಲಕರ್ಣಿ, ಸಿ.ಎಸ್.ಹಿರೇಮಠ, ಬಿ.ಎ.ಪಾಟೀಲ, ಪಿ.ಎಸ್.ಶೆಟ್ಟಿ, ಎಂ.ಬಿ.ಕುಂಬಾರ, ಸಿದ್ದು ಬಾನಿ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಗಜಾನನ ಕ್ವಳ್ಳಿ, ಶಿವಾನಂದ ಮುಡಸಿ, ಶೀತಲ ಬ್ಯಾಳಿ, ಗುರುರಾಜ ಕುಲಕರ್ಣಿ, ಪ್ರಶಾಂತ ಪಾಟೀಲ, ಕಲ್ಲಣ್ಣ ಚೌಗಲಾ, ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ಗುರುಸಿದ್ದ ಮೂಡಲಗಿ, ಗೌಸಲಾಜಮ್ ನಾಯಿಕವಾಡಿ, ಸತ್ತೆಪ್ಪ ಚಂದರಗಿ, ಸಂಜಯ ದೇಸಾಯಿ, ಲಕ್ಷ್ಮಣ ಯಮಕನಮರ್ಡಿ, ಆನಂದ ಲಕ್ಕುಂಡಿ, ಬಸವರಾಜ ನಾಗನ್ನವರ, ಈರಣ್ಣ ಹೂಗಾರ, ರುದ್ರಪ್ಪ ಮರಬಸ್ಸನವರ, ಶಿವನಗೌಡ ಪಾಟೀಲ ಇತರರಿದ್ದರು.
| ಪೃಥ್ವಿ ಕತ್ತಿಪ್ರಸಕ್ತ ವರ್ಷ ಉತ್ತಮ ಮಳೆಯಾದ ಕಾರಣ ಕಬ್ಬಿನ ಬೆಳೆ ಹೆಚ್ಚಾಗಿದೆ. ಕಬ್ಬಿನ ಅವಽ ಪ್ರಕಾರ ಕಳುಹಿಸಲು ಪ್ರಾರಂಭಿಸಿದರೆ ಮಾತ್ರ ಗುಣಮಟ್ಟದ ಸಕ್ಕರೆ ಉತ್ಪಾದನೆ ಸಾಧ್ಯ. ಇದರಿಂದ ರೈತರಿಗೂ ಯೋಗ್ಯ ದರ ನೀಡಲು ಅನುಕೂಲವಾಗುತ್ತದೆ.