ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೂಮಿ ಖರೀದಿ

14ark3
Published on

ಅರಕಲಗೂಡು: ಪಟ್ಟಣ ಪಂಚಾಯಿತಿ ಒಳ ಚರಂಡಿ ಯೋಜನೆಯ ತ್ಯಾಜ್ಯ ನಿರ್ವಹಣಾ ಘಟಕ ತೆರೆಯಲು ಭೂಮಿ ಖರೀದಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್ ತಿಳಿಸಿದರು.


ತಾಲೂಕು ಕಚೇರಿಯಲ್ಲಿ ಪಪಂ ಒಳಚರಂಡಿ ತಾಜ್ಯ ನಿರ್ವಹಣಾ ಘಟಕ ತೆರೆಯಲು ಭೂ ಮಾಲೀಕರಿಗೆ ಪರಿಹಾರ ಧನದ ಚೆಕ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ವೇ ನಂ 67/2 ರಲ್ಲಿ 1.24 ಎಕರೆ ಭೂಮಿ ಖರೀದಿ ಮಾಡಲಾಗಿದೆ. ಈ ಜಮೀನು ಕುರಿತು ಹಲವು ದಿನಗಳಿಂದ ನಡೆದಿದ್ದ ವ್ಯಾಜ್ಯ ಬಗೆಹರಿದಿದೆ. ಜಮೀನಿನ ಮಾಲೀಕರು ಪಪಂ ಹೆಸರಿಗೆ ಆಸ್ತಿ ನೋಂದಾಯಿಸಿಕೊಟ್ಟಿದ್ದು ಅವರಿಗೆ ಪರಿಹಾರ ಮೊತ್ತದ ಚೆಕ್ ವಿತರಿಸಲಾಗಿದೆ. ಭೂಮಿ ಖರೀದಿ ಪ್ರಕ್ರಿಯೆ ನಡೆದಿರುವ ಕಾರಣ ಒಳಚರಂಡಿ ವ್ಯವಸ್ಥೆ ಶೀಘ್ರದಲ್ಲೇ ಪ್ರಾರಂಭಗೊಂಡು ಪಟ್ಟಣ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿದೆ ಎಂದರು.

ಪಪಂ ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ, ವಕೀಲ ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net