ಯುಜಿಡಿ ಸಂಬoಧ ಶಾಸಕರ ಸಮ್ಮುಖದಲ್ಲಿ ಸಭೆ

purasabhe
Published on

ಕುಶಾಲನಗರ:

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಜಾರಿ ಸಂಬAಧ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಲು ಗುರುವಾರ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಯುಜಿಡಿ ಕಾಮಗಾರಿ ವಿಳಂಭದ ಬಗ್ಗೆ ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಳಿಸುವುದು, ಲೋಕಾರ್ಪಣೆಗೊಳಿಸುವುದು ಸೇರಿದಂತೆ ಭವಿಷ್ಯದಲ್ಲಿ ನಿರ್ವಹಣೆ ಮಾಡುವ ವಿಚಾರದ ಬಗ್ಗೆ ಒಳಚರಂಡಿ ಮಂಡಳಿ ಅಧಿಕಾರಿ ಪ್ರಸನ್ನ ಅವರೊಂದಿಗೆ ಸದಸ್ಯರು ಗಂಭೀರ ಚರ್ಚೆ ನಡೆಸಿದರು. ನಂತರ ಒಳಚರಡಿ ಯೋಜನೆ ಕಾಮಗಾರಿ ಹಾಗೂ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಮೃತ್-2 ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಆರಂಭದಲ್ಲಿ ಮನೆಗಳ್ಳತನ, ರಾಸುಗಳ ಕಳ್ಳತನ ಎಲ್ಲೆ ಮೀರಿದ್ದು ಸೂಕ್ತ ಕ್ರಮವಹಿಸುವಂತೆ ಸದಸ್ಯ ಜಿ.ಬಿ. ಜಗದೀಶ್, ಎಂ.ಎA.ಪ್ರಕಾಶ್ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರು. ವಿದ್ಯುತ್ ಕಂಬಗಳ ಬದಲಾವಣೆ, ಬೀದಿ ದೀಪಗಳ ನಿರ್ವಹಣೆ ಮತ್ತಿತರ ವಿದ್ಯುತ್ ವಿಚಾರಕ್ಕೆ ಸಂಬAಧಿಸಿದAತೆ ಉಂಟಾಗುತ್ತಿರುವ ವಿಳಂಭ ಹಾಗೂ ಸಮಸ್ಯೆಗಳ ಬಗ್ಗೆ ಸೆಸ್ಕ್ ಅಧಿಕಾರಿಯೊಂದಿಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಲು ಸದಸ್ಯ ಡಿ.ಕೆ. ತಿಮ್ಮಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೆರೆಗಳ ಅಭಿವೃದ್ಧಿಗೆ ಈಗಾಗಲೆ ಅಗತ್ಯ ಕ್ರಮವಹಿಸಿದ್ದು ಕೆಡಿಪಿ ಸಭೆಯಲ್ಲಿ ಶಾಸಕರು ಈ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉಲ್ಲೇಖಿಸಿದರು.

ಕಳೆದ ಮಳೆಗಾಲದಲ್ಲಿ ಗೊಂದಿಬಸವನಹಳ್ಳಿ ರೊಂಡಕೆರೆ ಏರಿ ಒಡೆದು ಅನಾಹುತ ಸೃಷ್ಠಿಸಿತ್ತು. ಒಡೆದ ಭಾಗವನ್ನು ಈಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ, ಇದಕ್ಕೆ ಶಾಶ್ವತ ಕಾಮಗಾರಿ ಕೈಗೊಳ್ಳುವ ಅಗತ್ಯವಿದೆ ಎಂದು ಸದಸ್ಯ ಎಂ.ಎA. ಪ್ರಕಾಶ್ ಹಾಗೂ ಜಿ.ಬಿ. ಜಗದೀಶ್ ಆಗ್ರಹಿಸಿದರು. ಒಡೆದ ಭಾಗದಲ್ಲಿ ಕಾಮಗಾರಿ ಸಂದರ್ಭ ನೀರು ಹರಿಬಿಡಲು ವಾಲ್ ಅಳವಡಿಕೆ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಕುಡಾ ಅಧ್ಯಕ್ಷರಲ್ಲಿ ಆಗ್ರಹಿಸಿದರು. ಈಗಾಗಲೇ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತರಲಾಗಿದೆ. ಕುಡಾ ವ್ಯಾಪ್ತಿಯಲ್ಲಿ ಈ ಕೆರೆ ಬರುವುದಿಲ್ಲ, ಸಣ್ಣ ನೀರಾವರಿ ಇಲಾಖೆಯಲ್ಲಿರುವ ಕೆರೆಗಳ ಪಟ್ಟಿಯಲ್ಲಿ ಕೂಡ ಈ ಕೆರೆಯ ಹೆಸರಿಲ್ಲ. ಕುಡಾ ವ್ಯಾಪ್ತಿ ವಿಸ್ತರಣೆ ಬಳಿಕ ಕೆರೆ ಒಳಗೊಂಡಲ್ಲಿ ಕುಡಾದಿಂದ ಅಗತ್ಯ ಕ್ರಮವಹಿಸಲಾಗುವುದು ಎಂದು ಕುಡಾ ಅಧ್ಯಕ್ಷರೂ ಆದ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ ತಿಳಿಸಿದರು.

ರೊಂಡಕೆರೆಯಿAದ ತಾವರೆಕೆರೆಗೆ ಸಂಪರ್ಕಿಸುವ ತೋಡಿಗೆ ಮಣ್ಣು ಹಾಕಲಾಗಿದೆ. ಸರ್ಕಾರಿ ಜಾಗಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದು ಸದಸ್ಯರಾದ ಡಿ.ಕೆ. ತಿಮ್ಮಪ್ಪ, ರೇಣುಕಾ, ಜೈವರ್ಧನ್, ಆನಂದಕುಮಾರ್ ಸಭೆಯಲ್ಲಿ ಒತ್ತಾಯಿಸಿದರು. ಕಡಂಗಗಳು ಒತ್ತುವರಿಯಾಗಿದ್ದು ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಲು ಸದಸ್ಯ ಎಂ.ಎA.ಪ್ರಕಾಶ್ ಆಗ್ರಹಿಸಿದರು. ಉಳಿದಂತೆ ಸಂಚಾರ ಸುವ್ಯವಸ್ಥೆ, ಸಾರ್ವಜನಿಕ ಗ್ರಂಥಾಲಯಕ್ಕೆ ನಿವೇಶನ ಒದಗಿಸುವುದು, ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಪುಟ್ಟಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್ ಸೇರಿದಂತೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net