

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಸಾಯಿ ಗಲ್ಲಿ ವಿಠ್ಠಲ ಮಂದಿರದ ಪುರಂದರ ಮಂಟಪದಲ್ಲಿ ಜು. 28ರಿಂದ 30ರವರೆಗೆ ಪುರಂದರದಾಸರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿದೆ.
ಜ. 28ರಂದು ಡಾ. ಶ್ಯಾಮಸುಂದರ ಬಿದರಕುಂದಿ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಆನಂದ ಪಾಂಡುರಂಗಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ದತ್ತ ನೀರಲಗಿ, ಡಾ. ಶ್ರೀಧರ ಕುಲಕರ್ಣಿ ಭಾಗವಹಿಸುವರು. ಪಂ. ಸುರೇಶಾಚಾರ್ಯ ರಾಯಚೂರ ಹರಿದಾಸ ಸಾಹಿತ್ಯದ ಮಹಿಮೆ ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 3 ಗಂಟೆಗೆ ಭಜನಾ ಮಂಡಳಗಳಿಗೆ ಹರಿದಾಸರು ಕಂಡ ವಿನಾಯಕನ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿದೆ.
ಜ. 29ರಂದು ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 7 ಗಂಟೆಗೆ ಪುರಂದರದಾಸರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ಭಜನಾ ಮಂಡಳಿ ಸದಸ್ಯರಿಂದ ಯಾಯಿವಾರ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಹರಿದಾಸರು ಕಂಡ ನರಸಿಂಹದೇವರ ಹಾಡುಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಎನ್.ಆರ್. ಕುಲಕರ್ಣಿ ಪ್ರಶಸ್ತಿ ವಿತರಿಸುವರು. ಅತಿಥಿಗಳಾಗಿ ವಾದಿರಾಜ ನಿಂಬರಗಿ, ಸಹನಾ ಜೋಶಿ, ಇಂದುಮತಿ ರಾವೇಂದ್ರ, ಗೀತಾ ಆಲೂರ ಆಗಮಿಸಲಿದ್ದಾರೆ.
ಜ. 30ರಂದು ಉತ್ತರಾರಾಧನೆ ನಿಮಿತ್ತ ಬೆಳಗ್ಗೆ 10 ಗಂಟೆಗೆ ಪಂ. ಕೆ.ಎಂ. ಕಲಮಂಗಿ ಆಚಾರ್ಯ ಉಪನ್ಯಾಸ ನೀಡುವರು. ನಂತರ ಉದಯ ದೇಶಪಾಂಡೆ ಹಾಗೂ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಪ್ರಸಕ್ತ ವರ್ಷದಲ್ಲಿ ಉದಯ ದೇಶಪಾಂಡೆ ಅವರಿಗೆ ಗುರುಪುರಂದರ ಪ್ರಶಸ್ತಿಯನ್ನು ಅನಂತಾಚಾರ್ಯ ಕಟಗೇರಿ ದಾಸರು ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಹರ್ಷ ಡಂಬಳ, ಅನಿಲ ಧಾರವಾಡಕರ, ಡಾ. ಶ್ರೀನಿವಾಸ ಕಲ್ಲಾಪುರ ಆಗಮಿಸುವರು. ಡಾ. ಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಠ್ಠಲ ಮಂದಿರದ ಗೌರವ ಅಧ್ಯಕ್ಷ ಎಸ್.ಬಿ. ಗುತ್ತಲ ಹಾಗೂ ಕಾರ್ಯದರ್ಶಿ ಕೆ. ಆರ್. ದೇಸಾಯಿ ತಿಳಿಸಿದ್ದಾರೆ.