ಪುರಂದರದಾಸರಿಂದ ಸಂಗೀತಕ್ಕೆ ಹೊಸ ತಿರುವು: ಪ್ರೊ.ವರದೇಶ್​

UDP-4-3-RaagaDhana
Published on

ಉಡುಪಿ: ಪುರಂದರ ದಾಸರಂತಹ ಅನೇಕ ದಾಸರು ಕರ್ನಾಟಕದ ಸಂಗೀತಕ್ಕೆ ಹೊಸ ತಿರುವು ನೀಡಿದ್ದಾರೆ. ಶತಮಾನಗಳ ಬಳಿಕವೂ ದಾಸರು ರಚಿಸಿರುವ ಭಕ್ತಿಪ್ರಧಾನ ಹಾಡುಗಳು ಇಂದಿಗೂ ನಾವೀನ್ಯತೆ ಉಳಿಸಿಕೊಂಡಿದೆ ಎಂದು ಮಣಿಪಾಲದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪೊ.ವರದೇಶ್​ ಹಿರೇಗಂಗೆ ತಿಳಿಸಿದರು.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಉಡುಪಿ ವತಿಯಿಂದ ಮೂರು ದಿನ ನಡೆದ 36ನೇ ವರ್ಷದ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರಿಗೂ ಸಂಗೀತದ ಕುರಿತಂತೆ ಅಪಾರ ಒಲವು ಇತ್ತು. ಸಂಗೀತ ಎನ್ನುವುದು ಅಮೂರ್ತತೆಯ ರೂಪ. ಹೀಗಾಗಿ ಅದನ್ನು ಮೂರ್ತರೂಪಕ್ಕೆ ತರುವಂತಹ ಸವಾಲು ಸಂಗೀತಗಾರರಿಗೆ ಇರುತ್ತದೆ. ಸಂಗೀತವೂ ಒಂದು ಭಾಷೆಯಾಗಿದ್ದು, ಅನುಭವ ಪ್ರಧಾನವಾದ ವಿಶ್ವಾತ್ಮಕ ಭಾಷೆಯಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಶ್ರೀಕಿರಣ ಹೆಬ್ಬಾರ್​ ಅಧ್ಯಕ್ಷತೆ ವಹಿಸಿದ್ದರು. ಹೇಮಲತಾ ರಾವ್​ ಪ್ರಾರ್ಥಿಸಿದರು. ವಿದುಷಿ ಸರೋಜಾ ಆಚಾರ್ಯ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ವಂದಿಸಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ
ವಯೋಲಿನ್​ ವಾದನದಲ್ಲಿ ಪದ್ಮಶ್ರೀ ಪುರಸತ ಪ್ರಥಮ ಮಹಿಳಾ ಕಲಾವಿದೆ ಎ. ಕನ್ಯಾಕುಮಾರಿ ಅವರಿಗೆ ರಾಗ ಧನ ಉಡುಪಿ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಕೆಲಹೊತ್ತು ವಯೋಲಿನ್​ ವಾದನ ನಡೆಸಿ ಪ್ರೇಕ್ಷಕರನ್ನು ರಂಜಿಸಿದರು. ಸತೀಶ್​ಕುಮಾರ್​ ಹಾಗೂ ಸಾಯಿ ರತ್​ ಸಾಥ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net