ಪುರಂದರ ದಾಸರು ರಚಿಸಿದ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಿದೆ

240120 Kushtagi Shrimadva Purandarostava
Published on

ಕುಷ್ಟಗಿ: ಪುರಂದರ ದಾಸರು ರಚಿಸಿದ ಸಾಹಿತ್ಯವನ್ನು ಪುರಂದರ ಉಪನಿಷತ್ತು ಎಂದು ಹೇಳಲಾಗುತ್ತಿದೆ. ಅಂತಹ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಿದೆ ಎಂದು ಭೀಮನಕಟ್ಟೆಯ ಶ್ರೀಮದ್ ಅಚ್ಯತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನದ ಮಠಾಧೀಶ ಶ್ರೀ ರಘುವರೇಂದ್ರತೀರ್ಥರು ಹೇಳಿದರು.

ಪಟ್ಟಣದ ಅಡವಿರಾಯ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಶ್ರೀಮಧ್ವ-ಪುರಂದರೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಾಸತೀರ್ಥರಂಥ ಮಹಾಜ್ಞಾನಿಗಳೇ ಪುರಂದರ ದಾಸರ ಸಾಹಿತ್ಯವನ್ನು ಹೊಗಳಿ ಕೊಂಡಾಡಿದ್ದಾರೆ ಎಂದರು. ಡಾ.ಸತ್ಯನಾರಾಯಣಾಚಾರ್ಯರು ಉಪನಿಷತ್ತಿಗೆ ಶ್ರೀಮಧ್ವರ ಕೊಡುಗೆ ಕುರಿತು ಮಾತನಾಡಿದರು. ಕಾರ್ಯಕ್ರಮ ಆಯೋಜಕ ಮೈಸೂರು ರಾಮಚಂದ್ರಾಚಾರ್, ದೇವಸ್ಥಾನ ಸಮಿತಿಯ ತಿಮ್ಮಪ್ಪಯ್ಯ ದೇಸಾಯಿ ಇತರರು ಇದ್ದರು. ಪಟ್ಟಣ ಸೇರಿ ವಿವಿಧೆಡೆಯಿಂದ ನೂರಾರು ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net