ಶ್ರೀ ಪುರಂದರ ದಾಸರ ಆರಾಧನೆ ಸಂಪನ್ನ

10 Dwd 3
Published on

ಧಾರವಾಡ: ನಗರದ ಪುರಂದರ ಮಂಟಪದಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಶ್ರೀ ಪುರಂದರ ದಾಸರ 3 ದಿನಗಳ ಆರಾಧನಾ ಮಹೋತ್ಸವ ಧರ್ಮದರ್ಶಿ ಸಿ. ನಾಗರಾಜ ಮಾರ್ಗದರ್ಶನದಲ್ಲಿ ಶನಿವಾರ ಸಂಪನ್ನಗೊ0ಡಿತು. ಉತ್ತರಾರಾಧನೆ ಕಾರ್ಯಕ್ರಮದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ದಾಸರ ರಥೋತ್ಸವ ಜರುಗಿತು.
ಇದಕ್ಕೂ ಮೊದಲು ಗುರುವಾರ ನಡೆದ ಪೂರ್ವಾರಾದನೆಯಲ್ಲಿ ನರರೋಗ ತಜ್ಞ ಡಾ. ಅನಿರುದ್ಧ ಕುಲಕರ್ಣಿ ಅವರಿಗೆ ಶ್ರೀ ಪುರಂದರ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಗೀತ ಕ್ಷೇತ್ರದ ಅರ್ಚನಾ ಕುಲಕರ್ಣಿ ಅವರಿಗೆಪುರಂದರ ಗಾನ ವಿಶಾರದೆ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಪಂಡಿತ ಜಿ.ವಿ. ನವಲಗುಂದ, ಇತರರಿದ್ದರು.
ಶುಕ್ರವಾರ ನಡೆದ ಮಧ್ಯಾರಾಧನೆ ಕಾರ್ಯಕ್ರಮದಲ್ಲಿ ದೇವರಿಗೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚನಾ ಕುಲಕರ್ಣಿ ದಾಸರ ನಾಮ ಪ್ರಸ್ತುತಪಡಿಸಿದರು. ಸ್ವರಚಿತ ಕೀರ್ತನೆ ಸ್ಪರ್ಧೆಯಲ್ಲಿ ರಜನಿ ಕುಲಕರ್ಣಿ ಪ್ರಥಮ ಸ್ಥಾನ ಪಡೆದರು. ಶ್ರೀ ಲಕ್ಷಿ÷್ಮÃ ಭಜನಾ ಮಂಡಳಿಯವರು ಕೋಲಾಟ ಪ್ರದರ್ಶಿಸಿದರು. ಜಿ.ವಿ. ನವಲಗುಂದ ದಾಸರ ವಚನ ಹಾಡಿದರು. ಪಿ.ಎಸ್. ಅಪರಂಜಿ, ವಿಜಯ ವಿಠಲಾಚಾರ್, ಆರ್.ಎಚ್. ಕುಲಕರ್ಣಿ, ರಮೇಶ ಕುಲಕರ್ಣಿ, ಆರ್.ಎಚ್. ಕುಲಕರ್ಣಿ, ವೇದವತಿ ನಾಗರಾಜ, ಶೋಭಾ ದ್ವಾರಪಾಲಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net