ಪುರಂದರ ಆರಾಧನಾ ಮಹೋತ್ಸವ ಸಂಪನ್ನ

2 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ದೇಸಾಯಿಗಲ್ಲಿ ವಿಠ್ಠಲ ಮಂದಿರದಲ್ಲಿ ಏರ್ಪಡಿಸಿದ್ದ ಪುರಂದರದಾಸರ ಆರಾಧನಾ ಮಹೋತ್ಸವವು ಗುರುವಾರ ಸಂಪನ್ನಗೊಂಡಿತು.

ಆರಾಧನೆ ನಿಮಿತ್ತ ಪುರಂದರದಾಸರ ಭಾವಚಿತ್ರದೊಂದಿಗೆ ಶಹರದ ಮುಖ್ಯರಸ್ತೆ ಹಾಗೂ ಎಂ.ಆರ್​. ನಗರದಲ್ಲಿ ಯಾಯಿವಾರ ನಡೆಸಲಾಯಿತು. ಭಜನಾ ಮಂಡಳಗಳಿಗೆ ಏರ್ಪಡಿಸಿದ್ದ ಹರಿದಾಸರು ರಚಿಸಿದ ನರಸಿಂಹ ದೇವರ ಹಾಡುಗಳ ಸ್ಪರ್ಧೆಯಲ್ಲಿ ಮಾಳಮಡ್ಡಿಯ ಉಡುಪಿ ಕೃಷ್ಣ ಭಜನಾ ಮಂಡಳ ಪ್ರಥಮ ಸ್ಥಾನ ಪಡೆದು ಗುರು ಪುರಂದರ ವಿಠ್ಠಲ ಪ್ರಶಸ್ತಿ ಪಡೆಯಿತು. ಸಾಧನಕೇರಿಯ ಚಂದ್ರಿಕಾ ಭಜನಾ ಮಂಡಳಿ (ದ್ವಿ) ಹಾಗೂ ಅಂಜನಾ ಭಜನಾ ಮಂಡಳಿ, ಲಕ್ಷ್ಮೀ ಭಜನಾ ಮಂಡಳಿ, ಅಮೃತ ಭಜನಾ ಮಂಡಳಿ ಸಮಾಧಾನಕರ ಪ್ರಶಸ್ತಿ ಪಡೆದವು. ನಿರ್ಣಾಯಕರಾಗಿ ಡಾ. ಶ್ರೀಧರ ಕುಲಕರ್ಣಿ, ಗೀತಾ ಆಲೂರ, ಎನ್​.ಆರ್​. ಕುಲಕರ್ಣಿ ಆಗಮಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಧಾರವಾಡದ ದಾಸರೆಂದೇ ಪ್ರಸಿದ್ಧಿ ಪಡೆದ ಅನಂತಾಚಾರ್ಯ ಕಟಗೇರಿ ಅವರಿಗೆ ವಿಠ್ಠಲ ಮಂದಿರದ ವತಿಯಿಂದ ಸನ್ಮಾನಿಸಲಾಯಿತು. ದಾಸವಾಣಿ ಪ್ರಸ್ತುತಪಡಿಸಿದ ಕಟಗೇರಿದಾಸರ ಶಿಷ್ಯ, ಬೆಳಗಾವಿಯ ಉದಯ ದೇಶಪಾಂಡೆ ದಾಸವಾಣಿ ಅವರಿಗೆ ಗುರು ಪುರಂದರ ವಿಠ್ಠಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಂ. ಕೆ. ಎಂ. ಕಲಮಂಗಿಯವರು ವಿನಾಯಕನ ಮಹಿಮೆ ಹಾಗೂ ಪುರಂದರದಾಸರ, ಭಾಗವತದ ಆಧ್ಯಾತ್ಮಕ ಚಿಂತನೆ ಕುರಿತು ಉಪನ್ಯಾಸ ನೀಡಿದರು. ಮಂದಿರದ ಗೌರವ ಕಾರ್ಯದರ್ಶಿ ಕೆ. ಆರ್​. ದೇಸಾಯಿ, ಗೌರವ ಕಾರ್ಯಾಧ್ಯಕ್ಷ ಎಸ್​.ಬಿ. ಗುತ್ತಲ, ವಿದ್ಯಾ ಗುತ್ತಲ, ಕಾಂಚನಾ ಜೋಶಿ, ಡಾ. ಎಚ್​.ಎ. ಕಟ್ಟಿ, ರಮೇಶ ಜಮಾದಾರ, ವಿವೇಕ ಏರಿ, ಮುತಾಲಿಕ ದೇಸಾಯಿ, ಎಚ್​. ವಾದಿರಾಜ ಆಚಾರ್ಯ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net