ಶರಣರ ಆದರ್ಶಗಳು ಜೀವನಕ್ಕೆ ಪಾಠ

purana program alavandi koppal swamiji
ಅಳವಂಡಿ ಸಮೀಪದ ಕಾತರಕಿ ಗ್ರಾಮದ ಶ್ರೀಗವಿಸಿದ್ದೇಶ್ವರ ಶಾಖಾ ಮಠದಲ್ಲಿ ನಡೆದ ಪುರಾಣ ಕಾರ್ಯಕ್ರಮದಲ್ಲಿ ಶ್ರೀಮರುಳಾರಾದ್ಯ ಶಿವಾಚಾರ್ಯರು ಮಾತನಾಡಿದರು. ಶ್ರೀಜಗದೀಶ ಹಿರೇಮಠ, ಪ್ರಮುಖರಾದ ವೆಂಕನಗೌಡ, ನಾಗರಾಜ, ಕೊಟ್ರಯ್ಯ, ಶಂಕರಗೌಡ, ಚಂದ್ರಾಮಪ್ಪ ಇತರರು ಇದ್ದರು.
Published on

ಕೊಪ್ಪಳ: ಹಬ್ಬ, ಹರಿದಿನ, ಜಾತ್ರೆ, ಧಾರ್ಮಿಕ ಕಾರ್ಯಗಳು ಜನರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡಿದಾಗ ಮಾತ್ರ ಧಾರ್ಮಿಕ ಆಚರಣೆಗೆ ಮಹತ್ವ ಬರುತ್ತದೆ. ಶರಣರ ಆದರ್ಶಗಳು ಜೀವನದ ಪಾಠ ತಿಳಿಸುತ್ತವೆ ಕಾರಣ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ಕಾತರಕಿ ಗ್ರಾಮದಲ್ಲಿ ಶ್ರೀಗವಿಸಿದ್ದೇಶ್ವರ ಶಾಖಾ ಗವಿಮಠದ 23 ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಈಶ್ವರ ದೇವರ ಶ್ರಾವಣ ಮಾಸದ ಕಾರ್ಯಕ್ರಮದ ಅಂಗವಾಗಿ ಪ್ರಾರಂಭವಾದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಶರಣರು, ಮಹಾತ್ಮರ ವಾಣಿ ಜೀವನ ನಡೆಸುವ ಹಾದಿ ತೋರಿಸುತ್ತವೆ, ಹಾಗೂ ಜೀವನದ ದಾರಿದೀಪವಾಗಿದೆ. ಜೊತೆಗೆ ಸತ್ಯ, ಧರ್ಮ, ನೀತಿ ಮಾರ್ಗದಲ್ಲಿ ನಡೆದು ಜೀವನವನ್ನು ಸಾರ್ಥಕ ಮಾಡಿಕೊಳ್ಳಿ ಎಂದರು.

ಸಾಹಿತಿ ಅರುಣಾ ನರೇಂದ್ರ ಪಾಟೀಲ ಮಾತನಾಡಿ, ಗುರುವಿನ ಮಾತುಗಳು, ಶರಣರ ವಚನಗಳು ಜೀವನದಲ್ಲಿ ಸಂಸ್ಕಾರದ ದಾರಿ ತೋರಿಸುತ್ತೆ. ಜೀವನದಲ್ಲಿ ಸಾಧನೆಯ ಶಿಖರ ಏರಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯ ಕಾರಣ ಗುರುವನ್ನು ಪೂಜಿಸಬೇಕು. ಮಕ್ಕಳ ಶಿಕ್ಷಣಕ್ಕೆ ಪಾಲಕರು ಪ್ರೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದ ಜೀವನ ಮಕ್ಕಳ ಬದುಕನ್ನು ನಾಶ ಮಾಡುತ್ತದೆ ಎಂದರು.

ಗದಗನ ಓಂಕಾರೇಶ್ವರ ಹಿರೇಮಠದ ಶ್ರೀಪಕೀರೇಶ್ವರ ಸ್ವಾಮಿಗಳು, ನೀರಲಗಿ ಶ್ರೀಜಗದೀಶ ಹಿರೇಮಠ, ಪ್ರಮುಖರಾದ ವೆಂಕನಗೌಡ ಹಿರೇಗೌಡರ, ನಾಗರಾಜ ಹುರಕಡ್ಲಿ, ಕೊಟ್ರಯ್ಯ ಅಬ್ಬಿಗೇರಿ, ಶಂಕರಗೌಡ ಹಿರೇಗೌಡರ, ಯಲ್ಲನಗೌಡ ಮಾಲಿಪಾಟೀಲ, ಯರಿಯಪ್ಪಗೌಡ ಹಿರೇಗೌಡರ, ಗವಿಸಿದ್ದೇಶ ಶೆಟ್ಟರ, ಚಂದ್ರಾಮಪ್ಪ ಕಣಗಾಲ, ಸಂಜೀವರಡ್ಡಿ ಮೇಟಿ, ಯರಿಯಪ್ಪ ವಾಲಿ, ಚಂದ್ರಗೌಡ ಅಬ್ಬಿಗೇರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net