ಪ್ರವಚನ ಆಲಿಕೆಯಿಂದ ಮನಸ್ಸು ಹಗುರ

purana pravachana hunasihala yalaburga koppal
Published on

ಕೊಪ್ಪಳ: ಶರಣರ ಕುರಿತ ಪ್ರವಚನ ಆಲಿಕೆಯೊಂದ ಮನಸ್ಸು ಹಗುರವಾಗುತ್ತದೆ ಎಂದು ಕುದರಿಮೋತಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.

ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ತಿಂಗಳ ಕಾಲ ಹಮ್ಮಿಕೊಂಡಿದ್ದ ಶ್ರೀ ಶರಣಬಸವೇಶ್ವರ ಮಹಾಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಸೋಮವಾರ ಮಾತನಾಡಿದರು.

ಒತ್ತಡದ ಜೀವನಕ್ಕೆ ನೆಮ್ಮದಿ ಕಾಣಲು ಪುರಾಣ ಆಲಿಕೆ, ಆಧ್ಯಾತ್ಮಿಕ ಚಿಂತನೆ ರಾಮಬಾಣವಾಗಿದೆ. ಮನಸ್ಸಿಗೆ ಶಾಂತಿ, ಕ್ರಿಯಾಶೀಲತೆ ಉಂಟಾಗಲು ಪ್ರತಿಯೊಬ್ಬರೂ ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸೆ.8ರಂದು ಕುಂಭಾಭಿಫಿೇಕ, ಸೋಮವಾರದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನಾ ಸಂಘದವರು, ಡೊಳ್ಳು ಕುಣಿತ, ಪುರವಂತರು ಹಾಗೂ ಸಕಲ ವಾದ್ಯವೃಂದದೊಂದಿಗೆ ಶ್ರೀ ವಿಜಯ ಮಹಾಂತ ಸ್ವಾಮೀಜಿಗಳ ಅಂದೋಲಿಕಾ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಹುಣಸಿಹಾಳ-ನಾಗರಹಾಳ ಶ್ರೀ ಶಾಂತವೀರ ಸ್ವಾಮೀಜಿ, ಪ್ರವಚನಕಾರ ವೆಂಕಟಾಪುರದ ಬಸವಣ್ಣಯ್ಯ ಶಾಸ್ತ್ರಿ, ಗಾಯಕ ಡಿ.ಹನುಮಂತ ಬಳಗಾನೂರು, ತಬಲಾ ವಾದಕ ಕೆ.ಬಸವರಾಜ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net