ಶ್ರೀವಿರಭದ್ರೇಶ್ವರ ಹಾಗೂ ಶರೀಪರ್ವತಮಲ್ಲೇಶ್ವರ ದೇವಸ್ಥಾನದ ಶತಮಾನೋತ್ಸವ: ಪುರಾಣ ಪ್ರವಚನಕ್ಕೆ ಚಾಲನೆ

17GDG04A
Published on

ವಿಜಯವಾಣಿ ಸುದ್ದಿಜಾಲ ಗದಗ
ಜೀವನದ ಅಲಂಕಾರ ಎಂದರೆ ನೀವು ನಂಬಿರುವ ವಸ್ತು. ಒಡವೆಗಳು ಶಾಶ್ವತ ಅಲಂಕಾರಗಳಲ್ಲ. ಮನುಷ್ಯನಿಗೆ ದೇವ ಮಂದಿರದ ಭಜನೆ, ಪೂಜೆ, ಪ್ರಸಾದಗಳು ಮನುಷ್ಯ ಜೀವನದ ಶಾಶ್ವತ ಅಲಂಕಾರಗಳು ಎಂದು ನರೇಗಲ್​ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿದರು.
ಬೆಟಗೇರಿ ಟೆಂಗಿನಕಾಯಿ ಬಜಾರ್​ ನಲ್ಲಿರುವ ಶ್ರೀವಿರಭದ್ರೇಶ್ವರ ಹಾಗೂ ಶ್ರೀಪರ್ವತಮಲ್ಲೇಶ್ವರ ದೇವಸ್ಥಾನದ ಶತಮಾನೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವೀರಭದ್ರೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಶ್ವತ ಅಲಂಕಾರಗಳಾಗಿರುವ ಧಾಮಿರ್ಕ ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಭಕ್ತರ ಮೇಲಿದೆ. ದೇವಾಲಯ ಸಂಸತಿ ಹಾಗೂ ಮಠ ಸಂಸತಿಯನ್ನು ನಾವೆಲ್ಲ ಪಾಲಿಸಿಕೊಂಡು ಬಂದಿದ್ದೇವೆ. ದೇವಾಲಯದಲ್ಲಿ ಮೂತಿರ್ ಪ್ರತಿಷ್ಠಾಪನೆ ಮಾಡುತ್ತೇವೆ ಹಾಗೂ ಮಠಗಳಿಗೆ ಸ್ವಾಮೀಜಿಗಳನ್ನು ನೇಮಕ ಮಾಡುತ್ತೇವೆ. ಇವೆರಡೂ ಸಂಸತಿಗಳು ನಿಮ್ಮ ಬದುಕನ್ನು ಪರಿವರ್ತನೆಗೊಳಿಸುವ, ಜೀವನಕ್ಕೆ ಉಪಯೋಗವಾಗುವ ಸಂಸತಿಗಳು. ಇವುಗಳನ್ನು ಆಚರಿಸಿ ಉಳಿಸಿಕೊಂಡು ಬೆಳಸಬೇಕು ಎಂದು ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿದರು.
ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅನ್ನದಾನೀಶ್ವರ ಮಠದ ಡಾ. ವೀರೇಶ್ವರ ಶ್ರೀಗಳು, ದೇವನುದೇವತೆಗಳ ಪವಾಡಗಳು ಇತಿಹಾಸದಿಂದ ತಿಳಿದು ಬಂದಿವೆ. ಅವುಗಳಲ್ಲಿ ದುಷ್ಟರ ಸಂಹಾರಕ್ಕಾಗಿಯೇ ಅವತರಿಸಿದ ಶ್ರೀವಿರಭದ್ರೇಶ್ವರ ದೇವರು ಮಾಡಿದ ಕಾರ್ಯಗಳು ಇಂದಿಗೂ ಸ್ಮರಣೀಯ. ಇಂತಹ ವೀರಭದ್ರೇಶ್ವರ ದೇವರ ಪುರಾಣ ಆಲಿಸುವ ನಾವೆಲ್ಲರೂ ಭಾಗ್ಯವಂತರು ಎಂದು ಹೇಳಿದರು.
ಪುರಾಣ ಪ್ರವಚನಕ್ಕೂ ಮುನ್ನ ಬೆಳಗ್ಗೆ 6 ಗಂಟೆಯಿಂದ ಗಣಪತಿ ಪೂಜೆ ಹಾಗೂ ಮಹಾ ರುದ್ರಾಭಿಷೇಕ ಜರುಗಿತು. ಬಳಿಕ ಎರಡು ಸಾವಿರಕ್ಕೂ ಅ-ಕ ಮುತೆದೆಯರಿಗೆ ದೇವಸ್ಥಾನದಲ್ಲಿ ಉಡಿತುಂಬವ ಕಾರ್ಯಕ್ರಮ ನಡೆಯಿತು.

ಪೂರ್ಣಕುಂಭ ಸ್ವಾಗತ
ಮಲ್ಲಿಕಾರ್ಜುನ ಶ್ರೀಗಳು ಹಾಗೂ ಬೆಟಗೇರಿ ನೀಲಕಂಠಮಠದ ನೀಲಕಂಠ ಪಟ್ಟದಾರ್ಯ ಶ್ರೀಗಳನ್ನು ಕುರಟ್ಟಿಪೇಟೆಯ ನೀಲಕಂಠ ಮಠದಿಂದ 108 ಪೂರ್ಣಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಭವ್ಯ ಸಾರೋಟದಲ್ಲಿ ಉಭಯ ಶ್ರೀಗಳನ್ನು ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳ ಮೂಲಕ ಬೆಟಗೇರಿ ವೀರಭದ್ರೇಶ್ವರ ದೇವಾಲಯಕ್ಕೆ ಕರೆ ತರಲಾಯಿತು.

ಬಾಕ್ಸ್​:
ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಪುರಾಣ ಪ್ರಚನ ನಡೆಯುತ್ತಿದೆ. ಡಿ. 21ರಂದು ಬಳಗಾನೂರ ಚಿಕೇನಕೊಪ್ಪ ಚನ್ನವಿರ ಶರಣರ ಮಠದ ಶಿವಶಾಂತವೀರ ಶರಣರ ಸಾನ್ನಿಧ್ಯದಲ್ಲಿ ರಾಣ ಪ್ರವಚನ ಮಂಗಲೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net