

ವಿಜಯವಾಣಿ ಸುದ್ದಿಜಾಲ ಗದಗ
ನಾವಿಂದು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ. ಧರ್ಮ ಉಳಿಯಬೇಕು. ಆಚಾರ ವಿಚಾರ ಉಳಿದು ಬೆಳೆದು ಬರಲು ನಾವೆಲ್ಲರೂ ತ್ರಿಕರ್ಣ ಪೂರ್ಣವಾಗಿ ಕಂಕಣಬದ್ಧರಾಗಬೇಕಿದೆ ಎಂದು ಅಡ್ನೂರಿನ ಪೂಜ್ಯ ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು ಹೇಳಿದರು.
ಮಂಗಳವಾರ ಗದಗ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ದಾನೇಶ್ವರಿ ಮಹಿಳಾ ಮಂಡಳ, ವೀರಭದ್ರ ದೇವಸ್ಥಾನ ಟ್ರಸ್ಟ್ ಕಮೀಟಿ ಸಹಯೋಗದಲ್ಲಿ ಶರಣೆ ದಾನಮ್ಮತಾಯಿ ಪುರಾಣ ಪ್ರವಚನದ ಮಹಾಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೀರಶೈವರು, ಲಿಂಗಾಯತರು ಮೊದಲು ಲಿಂಗ ಧರಿಸಬೇಕು. ಲಿಂಗ ಧರಿಸಿದವರು ಲಿಂಗಾಯತರು. ಇಂದು ವೀರಶೈವರು ಲಿಂಗಾಯತರು ಎಷ್ಟೀದ್ದೀರಿ? ಎಷ್ಟು ಜನ ಲಿಂಗವನ್ನು ಧರಿಸಿದ್ದೀರಿ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಷ್ಟಲಿಂಗ ಧರಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ಅಂಗದಲ್ಲಿ ಧರಿಸಿದ ಲಿಂಗ ಅಂಗೈಗೆ ಬಂದು ನಿಷ್ಠೆಯಿಂದ ಪೂಜೆಗೊಳ್ಳಬೇಕು. ನಾವೆಷ್ಟೇ ಬಂಗಾರ ಬೆಳ್ಳಿ ಧರಿಸಿದರೂ ಕೊನೆಗೆ ನಮ್ಮ ಹಿಂದೆ ಬರುವದು ಧರಿಸಿದ ಲಿಂಗವೊಂದೇ ಎಂದರು.
ರಾಚಪ್ಪ ಮಿಣಜಗಿ ಮಾತನಾಡಿ, ದಾನೇಶ್ವರಿ ಮಹಿಳಾ ಮಂಡಳ ಕಳೆದ 17 ವರ್ಷಗಳಿಂದ ದೇವಿ ಪುರಾಣ ಪ್ರವಚನ ಏರ್ಪಡಿಸಿ ಈ ಭಾಗದಲ್ಲಿ ಭಕ್ತಿ ಜ್ಞಾನವನ್ನು ಪ್ರಸರಿಸಿದೆ. ದೇವಸ್ಥಾನದ ಟ್ರಸ್ಟಿಗಳು ಉತ್ಸಾಹಿ ಯುವಕರ ಪಡೆ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ್ದಾರೆ. ಬರುವ ದಿನಗಳಲ್ಲಿ ದೇವಸ್ಥಾನವನ್ನು ಜೀಣೋರ್ದ್ಧಾರಗೊಳಿಸಿ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪಂ. ಎಂ. ಕಲ್ಲಿನಾಥಶಾಸ್ತ್ರಿ ಅಡ್ನೂರ ಅವರಿಂದ ದಾನಮ್ಮ ದೇವಿ ಪುರಾಣ ಪ್ರವಚನ ಮಾಲಿಕೆ ಮಹಾಮಂಗಲಗೊಂಡಿತು.
ವೀರೇಶ ಗಣಾಚಾರಿ, ರತ್ನಮ್ಮ ಹಿರೇಮಠ, ಈರಮ್ಮ ಚಳ್ಳಮರದ, ಕಮಲಮ್ಮ ಜಂಗಮನಿ, ಶಿವಪ್ಪ ಶಿವಸಿಂಪಗೇರ ಹಲವರನ್ನು ಸನ್ಮಾನಿಸಲಾಯಿತು.
ಪುರಾಣ ಸಮಿತಿಯ ಅಧ್ಯೆ ಸುಧಾ ಕೆರೂರ, ಗೌರವಾಧ್ಯೆ ಶೈಲಜಾ ಕೊಡೇಕಲ್, ಸುರೇಖಾ ಪಿಳ್ಳಿ, ಕಾರ್ಯದಶಿರ್ ವಿಜಯಲಕ್ಷಿ$್ಮ ಕಾತರಕಿ, ಶೋಭಾ ಗುಗ್ಗರಿ, ಶಿವಪುತ್ರಪ್ಪ ಶಿವಶಿಂಪಿಗೇರ, ಶಿವಬಸಪ್ಪ ಯಂಡಿಗೇರಿ, ಬಸವರಾಜ ಕಾಡಪ್ಪನವರ, ಶಿವಕುಮಾರ ಬೇವಿನಮರದ, ಈರಣ್ಣ ಕಾತರಕಿ, ಸುರೇಶ ಸಿರಿಗಣ್ಣವರ, ವೀರೇಶ ಮುನವಳ್ಳಿ, ರಾಚಪ್ಪ ಮಿಣಜಗಿ, ಶಂಭು ಕಾರಕಟ್ಟಿ, ಬಸವರಾಜ ರಾಮನಕೊಪ್ಪ, ಜಗದೀಶ ಯಚ್ಚಲಗಾರ, ಪ್ರದಿಪ ಕೊಡೇಕಲ್, ಶ್ರೀಶೈಲಪ್ಪ ಯಂಡಿಗೇರಿ ಇದ್ದರು.