ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಸಾಮೂಹಿಕ ವಿವಾಹ

05GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಕದಳಿ ಮಠದಲ್ಲಿ ಬುಧವಾರ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.
ಮಾಜಿ ಶಾಸಕ ಬಿ. ಆರ್​. ಯಾವಗಲ್ಲ ಮಾತನಾಡಿ, ಉಚಿತ ಸಾಮೂಹಿಕ ವಿವಾಹವನ್ನು ಮಾಡುವುದರಿಂದ ಅನಗತ್ಯ ರ್ಖಚನ್ನು ತಡೆದು ಆಥಿರ್ಕ ಮಿತವ್ಯಯ ಸಾಧಿಸಬಹುದು. ಸರ್ವರೂ ಇಂತಹ ಕಾರ್ಯ ಮಾಡುವುದರಿಂದ ಸಮಾಜದಲ್ಲಿ ಸಾಮರಸ್ಯ ನೆಲೆಯೂರಲು ಸಾಧ್ಯ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ನಿಡಗುಂದಿಕೊಪ್ಪದ ಸಿದ್ದರಾಮ ದೇವರು, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉಚಿತ ಸಾಮೂಹಿಕ ವಿವಾಹದಿಂದ ಸಮಾಜದಲ್ಲಿ ಭಾವೈಕ್ಯತೆ ಮೂಡಲು ಸಾಧ್ಯವಾಗುತ್ತದೆ ಹಾಗೂ ಜನರಲ್ಲಿ ಸೇವಾ ಮನೋಭಾವನೆ ಮೂಡುತ್ತದೆ. ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕದಳೀ ಮಠದಲ್ಲಿ ರುದ್ರಾಭಿಷೇಕ, ಕುಂಭಮೇಳ, ಸುಮಂಗಲೆಯರಿಂದ ಆರತಿ, ಶರಣಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು.
ನೆಹರು ಕಂಬಳಿ, ಶಂಕರ ಕಳಿಗೋಣ್ಣವರ, ಗುರುಮಲ್ಲಯ್ಯ ಪುರಾಣಿಕಮಠ, ಬಸಯ್ಯಶಾಸ್ತ್ರೀ ಭಿಾವತಿಮಠ, ಎಚ್​.ವೈ. ಹುಲ್ಲೂರ, ಕರೆವ್ವ ಚಲವಾದಿ, ಮಹೇಶ ಸತ್ತಿಗೇರಿ, ಶರಣಪ್ಪ ರಬ್ಬನಗೌಡ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net