

ತಿಕೋಟಾ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ಮಹಾತ್ಮ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ ಸೆ.9 ರಂದು ಮುಕ್ತಾಯವಾಗಲಿದೆ.
ಅಂದು ಬೆಳಗ್ಗೆ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೊಜೆ, ವಿಶೇಷ ಅಲಕಾಂರ ನಡೆಯುತ್ತದೆ. ವಿವಿಧ ಕಲಾ ತಂಡದೊಂದಿಗೆ ಕುಂಭಮೇಳ ಹಾಗೂ ಪಲ್ಲಕಿ ಉತ್ಸವ, ನಂತರ ಧರ್ಮಸಭೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಜರುಗುವುದು. ಧರ್ಮಸಭೆಯಲ್ಲಿ ಹಿರೇಮಠದ ನಲಿಂಗ ಚಕ್ರವರ್ತಿ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಅಧ್ಯತೆ ವಹಿಸುವರು. ಮುಖ್ಯ ಅತಿಥಿಯಾಗಿ ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜರು, ಪುರಾಣಿಕ ಉಮರಾಣಿ, ಮುರುಗೇಂದ ್ರಶಾಸ್ತಿಗಳು ಹಾಗೂ ಸಂಗೀತ ಬಳಗ ಭಾಗವಹಿಸುವರ ಎಂದು ಪ್ರಕಟಣೆ ತಿಳಿಸಿದೆ.