ಧುತ್ತರಗಾಂವ್‌ದಲ್ಲಿ ಪುರಾಣ ಮಂಗಲ ನಾಳೆ

04092022-kashi-sri-uttaradhikari
Published on

ಆಳಂದ: ಧುತ್ತರಗಾಂವ್ ಗ್ರಾಮದ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಶ್ರೀ ವೀರೇಶ್ವರ ಪುರಾಣ ಮಹಾಮಂಗಲ ಮಹೋತ್ಸವ ಗುರುವಾರ ನೆರವೇರಲಿದೆ.

ಗುರುವಾರ ಬೆಳಗ್ಗೆ 10ಕ್ಕೆ ಶಿವಾನುಭವ ಗೋಷ್ಠಿ ನಡೆಯಲಿದೆ. ಕಾಶೀ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ, ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ಅಧ್ಯಕ್ಷತೆ, ಜಿಡಗಾದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕ ಬಿ.ಆರ್.ಪಾಟೀಲ್, ಮಾಜಿ ಶಾಸಕ ಸುಭಾಷ ಗುತ್ತೇದಾರ್ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಗುರುಪಾದ ಪೂಜೆ, ಜಂಗಮಾರಾಧನೆ, ಮಧ್ಯಾಹ್ನ 1.30ರಿಂದ ರಾತ್ರಿವರೆಗೆ ಮಹಾಪ್ರಸಾದ ಇರಲಿದೆ. ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಶ್ರೀ ವೀರೇಶ್ವರ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net