

ಕುರುಗೋಡು: ಭಗವಂತ ಸಿರಿವಂತರಿಗೆ ಹಣ-ಅಂತಸ್ತು ಐಶ್ವರ್ಯ ಐಷಾರಾಮ ಜೀವನ ಕೊಟ್ಟರೆ ಬಡವರಿಗೆ ಪ್ರೀತಿ, ಅನುಕಂಪ, ಕನಿಕರದ ಸಂಪತ್ತು ಕೊಟ್ಟಿರುತ್ತಾನೆ ಎಂದು ಶ್ರೀ ಮಠದ ವೇದಮೂರ್ತಿ ಎಸ್ ಎಂ ಗುರುರಾಜಸ್ವಾಮಿ ಹೇಳಿದರು.
ಸಮೀಪದ ಮಣ್ಣೂರು ಸೂಗೂರು ಗ್ರಾಮದಲ್ಲಿ ಶನಿವಾರ ಶಿವಯೋಗಿ ಶ್ರೀ ಗುರುಪಾದಪ್ಪ ತಾತನವರ 69 ನೇ ಪುರಾಣ ಮೋಹೋತ್ಸವ ಹಾಗೂ ನವರಾತ್ರಿ ಶ್ರೀ ದೇವಿ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎರಡೂ ಕೈಗಳಿಂದ ಒಂದೇ ಬಾರಿಗೆ 50 ಜನರನ್ನು ಹೊಡೆಯಲಾಗದು. ಆದರೆ, ಎರಡು ಕೈಗಳನ್ನು ಜೋಡಿಸಿ ನಮಿಸುವುದರಿಂದ ಕೋಟ್ಯಂತರ ಜನರ ಹೃದಯವನ್ನು ಗೆಲ್ಲಬಹುದು ಎಂದರು.
ಈ ವೇಳೆ ಬಾಗೋಡಿ ಸಿದ್ದಲಿಂಗನ ಗೌಡ, ಜಿ. ಮುದ್ದನಗೌಡ, ಎವಿ ರುದ್ರಗೌಡ್ರು, ಕುರುಬರ ಹನುಮಂತಪ್ಪ, ಬಟ್ಟರಹಳ್ಳಿ ಬಸವನಗೌಡ, ದೊಡ್ಡಬಸಪ್ಪ, ದೊಡ್ಡಪಕ್ಕೀರರಪ್ಪ, ರಾಮಣ್ಣ ನವರ ಮಲ್ಲಯ್ಯ, ನಾಗರಾಜ, ಜಿ. ದೊಡ್ಡಬಸಪ್ಪ ಸೇರಿ ಎಂ ಸೂಗೂರು, ಮುದಟ್ಟನೂರು, ನಡುವೆ, ಶಿರಿಗೇರಿ, ಹಾವಿನಹಾಳ್, ದೊಡ್ಡರಾಜು ಕ್ಯಾಂಪ್ ಅಪಾರ ಭಕ್ತರು ಇದ್ದರು.