

ತಿಕೋಟಾ: ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಖ್ಯಾತಿ ಪಡೆದ ಮುರುಘೇಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರಾಗಿದ್ದಾರೆ ಎಂದು ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜರು ಹೇಳಿದರು.
ತಾಲೂಕಿನ ಅತಾಲಟ್ಟಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಮಂಡಳಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಅಥಣಿ ಜಂಗಮ ಯೋಗಿ ಮುರುಘೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಪುರಾಣ ಮುಕ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಯೋಗಿ ಮುರಘೇಂದ್ರ ಶ್ರೀಗಳ ವಾಕ್ ಸಿದ್ಧಿ ಮತ್ತು ಮನೋಸಿದ್ಧಿಗಳನ್ನು ಸಮಕಾಲಿನ ಜನರು ಅಪಾರವಾಗಿ ಗೌರವಿಸುತ್ತಿದ್ದರು ಎಂದರು. ಇಂಗಳೇಶ್ವರದ ವಚನಶಿಲಾ ಶಾಸನ ಮಂಟಪ ರಚಿಸಿದ ಚನ್ನಬಸವ ಸ್ವಾಮಿಗಳು, ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಸಿದ್ರಾಮಯ್ಯ ಹಿರೇಮಠ, ಮಲ್ಲಪ್ಪ ಮನಗೂಳಿ, ಭೀಮಪ್ಪ ಪಟೇದ, ಸಂತೋಷ ಬೀಳಗಿ, ಬಸವರಾಜ ಸಾವಳಗಿ, ಪ್ರವೀಣ ಮನಗೂಳಿ, ರಾಮಣ್ಣಗೌಡ ಬಗಳಿ, ನಿಂಗಪ್ಪ ಚೋಬ್ಬನಕಳಿ ಇದ್ದರು. ನಂತರ ಪಲ್ಲಕ್ಕಿ ಉತ್ಸವ ಮತ್ತು ನಂದಿಕೋಲ ಮೆರವಣಿಗೆ ನಡೆಯಿತು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು.