

ತೆಲಸಂಗ: ಪುರಾಣ ಪುಣ್ಯಕಥೆಗಳ ಶ್ರವಣದಿಂದ ಮಾನವ ಜೀವನ ಪಾವನವಾಗುತ್ತದೆ ಎಂದು ಶಿರಡೋಣದ ಡೊಳ್ಳಿನ ಪದ ಗಾಯಕ ಗಿರಿಮಲ್ಲ ಬೆಳ್ಳುಂಡಗಿ ಹೇಳಿದರು.
ಸಮೀಪದ ಕನ್ನಾಳ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದ ವನದಲ್ಲಿ ಶನಿವಾರ ಏರ್ಪಡಿಸಿದ್ದ 38ನೆಯ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸತ್ಸಂಗವು ಜೀವನ ಪಾವನಗೊಳಿಸಿ ಸುಭಿಕ್ಷೆ ನೆಲೆಸುವಂತೆ ಮಾಡುತ್ತದೆ ಎಂದರು.
ನಿವೃತ್ತ ಶಿಕ್ಷಕ ಬಿ.ಜಿ.ಸಾರ್ವಾಡ ಮಾತನಾಡಿ, ಭಗವಂತ ಯಾವತ್ತೂ ಆಂತರಂಗದ ಭಕ್ತಿಗೆ ಒಲಿಯುತ್ತಾನೆ. ಮನೆಯಿಂದಲೇ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು ಎಂದರು.
ನಿವೃತ್ತ ಶಿಕ್ಷಕ ಬಿ.ಎನ್.ಅವಟಿ ಮಾತನಾಡಿ, ಚಂಚಲ ಮನಸ್ಸಿಗೆ ಕಡಿವಾಣಕ್ಕೆ ಸಂಸ್ಕಾರ ಬೇಕು ಎಂದರು. ಕನ್ನಾಳದ ಬಸವಲಿಂಗ ಸ್ವಾಮೀಜಿ, ನಾನಾಗೌಡ ಪಾಟೀಲ, ಯಂಕಣ್ಣ ಅಸ್ಕಿ, ಧರೆಪ್ಪ ದಳವಾಯಿ, ಶೇಖರ ವಳಸಂಗ ಇತರರು ಇದ್ದರು. ಶ್ರೀಶೈಲ ಇಸರಗೊಂಡ ನಿರೂಪಿಸಿದರು. ಸಂಜೀವ ಅಸ್ಕಿ ಸ್ವಾಗತಿಸಿ ವಂದಿಸಿದರು.