ಚನ್ನವೀರ ಶಿವಾಚಾರ್ಯರ ಬಡಾವಣೆಯಲ್ಲಿ ಶ್ರಾವಣ ಮಂಗಲೋತ್ಸವ

IMG-20240906-WA0054
Published on

ಚಿಂಚೋಳಿ: ಪಟ್ಟಣದ ಚಂದಾಪೂರದ ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯರ ಬಡಾವಣೆಯಲ್ಲಿನ ಶ್ರೀ ಈಶ್ವರ ದೇವಾಲಯದಲ್ಲಿ ಒಂದು ತಿಂಗಳ ಕಾಲ ವಿಶೇಷ ಪೂಜೆ, ಮಹಿಳಾ ಭಕ್ತರಿಂದ ಭಜನಾ ಸೇರಿದಂತೆ ವಿವಿಧ ಪೂಜೆ ಜರುಗಿದವು.

ಶುಕ್ರವಾರದಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಬಡಾವಣೆಯ ನಿವಾಸಿಗಳು ಆಗಮಿಸಿ ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿ ಪುನಿತರಾದರು.

ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ದೇಶಪಾಂಡೆ, ಸಂಗನಬಸಪ್ಪ ಬಿರಾದಾರ, ಮಲ್ಲಿಕಾರ್ಜುನ ದೇಗಲ್ಮಡಿ, ಕೃಷ್ಣ, ದತ್ತಾತ್ರೇಯ, ನಾಗರಾಜ್, ಮಹೇಶ್, ಸಂಗನಬಸಮ್ಮ, ವಿದ್ಯಾವತಿ, ಸುನೀತಾ, ಶಾರದಬಾಯಿ, ಸ್ವಪ್ನಾ,ಸಂಪಾವತಿ, ವಿಜಯಲಕ್ಷ್ಮಿ, ಸಂಗೀತಾ, ಶೋಭಾ, ಪುಜಾ, ಅಪರ್ಣಾ, ರತ್ನಾ ಯಂಪಳ್ಳಿ, ರೂಪಾ, ಮುತ್ತಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net