ತಮಿಳುನಾಡಿನ ಕೈಗೊಂಬೆಯಾದ ರಾಜ್ಯ ಸರ್ಕಾರ

29sri-1
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಶಿರಸ್ತೇದಾರ್ ಚಂದ್ರಶೇಖರ್‌ಗೆ ಮನವಿ ಸಲ್ಲಿಸಿದರು. ಸುನೀತಾ, ಕೆ.ಎಸ್.ರಮೇಶ್, ಭರತ್, ಸುನೀತಾ, ಅಜಿತ್ ಕುಮಾರ್ ಇದ್ದರು.
Published on

ಶೃಂಗೇರಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ, ಜೆಡಿಎಸ್,ಬಿಎಸ್‌ಪಿ, ರೈತಸಂಘ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮುಖ್ಯಬೀದಿಯಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಚಂದ್ರಶೇಖರ್‌ಗೆ ಮನವಿ ಸಲ್ಲಿಸಿ ಬಿ.ಎಸ್.ಪಿ ಮುಖಂಡ ಕೆ.ಎಂ.ಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿಗೆ ಕಾವೇರಿ ಪ್ರಮುಖ ಜೀವಸೆಲೆಯಾಗಿದೆ. ರಾಜ್ಯದ ಜನರ ಹಿತರಕ್ಷಣೆ ಬದಿಗಿಟ್ಟು ಕಾಂಗ್ರೆಸ್ ಸರ್ಕಾರದ ತಮಿಳುನಾಡಿನ ಕೈಗೊಂಬೆಯಾಗಿ ನೀರು ಬಿಡುತ್ತಿದೆ. ತಕ್ಷಣ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ರಾಜ್ಯದ ರೈತರು ಹಾಗೂ ಜನರ ಹಿತರಕ್ಷಣೆ ಮಾಡುವುದಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಭರತ್ ಗಿಣಕಲ್ ಮಾತನಾಡಿ, ಮಲೆನಾಡಿನ ಮಕ್ಕಳು ತಾಲೂಕಿನ ಬೆಳೆಗಳಿಗೆ ಆವರಿಸಿದ ರೋಗಬಾಧೆಯಿಂದ ಉದ್ಯೋಗ ಅರಸಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರಿಗೆ ಮುಂದೆ ನೀರಿನ ಅಭಾವ ಸಂಭವಿಸಿದ್ದರೆ ಅವರು ನಿರುದ್ಯೋಗಿಗಳಾಗಿ ಮತ್ತೆ ಮಲೆನಾಡಿಗೆ ಬರುವ ಸಂಭವ ಹೆಚ್ಚಾಗಲಿದೆ. ಸರ್ಕಾರದ ಕೂಡಲೇ ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರೆಗೆ ಅಂಗಡಿ-ಮುಂಗಟ್ಟು ಮುಚ್ಚಿದ್ದವು. ಖಾಸಗಿ ವಾಹನಗಳ ಓಡಾಟ ಸ್ಥಗಿತವಾಗಿತ್ತು. ಸರ್ಕಾರಿ ಬಸ್‌ಗಳು ಮಾತ್ರ ಸಂಚರಿಸಿದವು. ಜಿಪಂ ಮಾಜಿ ಅಧ್ಯಕ್ಷ ಬಿ.ಶಿವಶಂಕರ್,ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಪ್ರಧಾನ ಕಾರ್ಯದರ್ಶಿಗಳಾದ ನೂತನ್‌ಕುಮಾರ್, ಎಚ್.ಎಸ್.ವೇಣುಗೋಪಾಲ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ್ ತಿಪ್ಪರಮಕ್ಕಿ, ತಾಲೂಕು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರಾಜೇಶ್ ಮೇಗಳಬೈಲು, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಸಂಪೇಕೊಳಲು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net