ಮನೆಮನೆಗಳಲ್ಲಿ ಬೊಂಬೆ ಪ್ರದರ್ಶನ ಕಲರವ

28_09_2025_BGR_RURAL_PAGE_5B
ವಿಜಯಪುರದ 6ನೇ ವಾರ್ಡಿನಲ್ಲಿ ಮನೆಯೊಂದರಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಬೊಂಬೆಗಳನ್ನು ಜೋಡಿಸಿರುವುದು.
Published on

ವಿಜಯಪುರ : ದಸರಾ ಎಂದರೆ ಗೊಂಬೆಗಳ ಹಬ್ಬ ಎಂಬ ಪ್ರತಿತಿ ಕೂಡ ಇದೆ. ದಸರಾ ಸಮಯದಲ್ಲಿ ಹಲವರು ಮನೆಗಳಲ್ಲಿ ವಿಶೇಷ ಗೊಂಬೆಗಳನ್ನು ಪ್ರದರ್ಶನ ಮಾಡುವುದನ್ನು ಈ ಹಿಂದಿನಿಂದಲೂ ರೂಢಿಸಿಕೊಂಡು ಬರಲಾಗಿದೆ. ಅಂತೆಯೇ ಪಟ್ಟಣದ ಹಲವರ ಮನೆಗಳಲ್ಲಿ ಬೊಂಬೆ ಪ್ರದರ್ಶನಕ್ಕಿಟ್ಟಿರುವುದು ಎಲ್ಲರನ್ನೂ ಆಕರ್ಷಿಸುತ್ತಿದೆ.

ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿನಂತೆ ಚಂದದ ಪಟ್ಟದ ಬೊಂಬೆಗೆ ರಾಜ ರಾಣಿಯರಂತೆ ಅಲಂಕರಿಸಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಂತರದ ಸಾಲುಗಳಲ್ಲಿ, ದಶಾವತಾರ, ನವದುರ್ಗೆಯರು, ಅಷ್ಟಲಕ್ಷಿ$್ಮ, ಶ್ರೀಕೃಷ್ಣಾವತಾರ, ಕಾಳಿಂಗ ಮರ್ದನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳಾದ ದುರ್ಗಿ ಹಾಗೂ ಶಾರದೆಯ ವಿಗ್ರಹ, ಮೈಸೂರು ಅರಮನೆ, ಜಂಬುಸವಾರಿ, ಕ್ರಿಸ್ಮಸ್​ ಆಚರಣೆ, ಶೆಟ್ಟಪ್ಪ, ಶೆಟ್ಟಮ್ಮ, ಕ್ರಿಕೆಟ್​ ಸ್ಟೇಡಿಯಂ, ಹಳ್ಳಿಯ ಜೀವನ, ವಿವಿಧ ದೇವತೆಗಳ ವಿಗ್ರಹಗಳು, ವಿವಾಹ ಮಹೋತ್ಸವ, ಆರತಕ್ಷತೆ, ಸೀಮಂತ, ವಿವಿಧ ವಾದ್ಯಗಳು, ಪ್ರಾಣಿ, ಪಕ್ಷಿಗಳು ಮತ್ತಿತರ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ. ಅಂಬಾರಿ ಹೊತ್ತ ಆನೆ, ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೃಷ್ಣ ಮೊದಲಾದ ಕಲಾಕೃತಿಗಳು ಆಕರ್ಷಕವಾಗಿವೆ. ನಾಲ್ಕು ದಶಕಗಳಿಂದ ಪ್ರತಿವರ್ಷ ನವರಾತ್ರಿಯಲ್ಲಿ ಗೊಂಬೆಗಳನ್ನು ಕೂರಿಸಿ ಪೂಜಿಸುತ್ತಾ ಬಂದಿದ್ದು, ನವರಾತ್ರಿ ಮುಗಿಯುವವರೆಗೂ ಪ್ರತಿ ದಿನ ಸಂಜೆ ಗೊಂಬೆಗಳಿಗೆ ಪೂಜಿಸುತ್ತೇವೆ. ಸಂಜೆಯಾಗುತ್ತಿದ್ದಂತೆ ಮಕ್ಕಳು ಬಂದು ಬೊಂಬೆ ತಿಂಡಿ ಕೇಳುತ್ತಾರೆ. ಅವರಿಗೆ ತಿಂಡಿಗಳನ್ನು ತಯಾರಿಸಿಟ್ಟುಕೊಳ್ಳುವುದೇ ಹಬ್ಬದ ಸಂಭ್ರಮದ ಒಂದು ಭಾಗವಾಗಿ ಬಿಡುತ್ತದೆ ಎನ್ನುತ್ತಾರೆ ಪಟ್ಟಣದ ವಿಜಯಮ್ಮ.

ನಾವು ಬಹಳ ವರ್ಷಗಳಿಂದ ಬೊಂಬೆಗಳನ್ನು ಜೋಡಿಸಿ, ನಾಡಿನ ಸಂಸತಿ ಪರಿಚಯ ಮಾಡಿಕೊಡುತ್ತಿದ್ದೇವೆ. ಚನ್ನಪಟ್ಟಣ, ತಮಿಳುನಾಡಿನ ಕೃಷ್ಣಗಿರಿ, ಶಿರಡಿ, ಮಂತ್ರಾಲಯ ಮುಂತಾದ ಅನೇಕ ಕಡೆಗಳಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಬೊಂಬೆಗಳನ್ನು ಖರೀದಿ ಮಾಡಿಕೊಂಡು ಬಂದಿದ್ದೇವೆ. 1500ಕ್ಕೂ ಹೆಚ್ಚು ಬೊಂಬೆಗಳನ್ನು ಶೇಖರಣೆ ಮಾಡಿಕೊಂಡಿದ್ದೇವೆ. > ಶಿವಕುಮಾರ್​, ಪುರಸಭೆ ನಿವೃತ್ತ ಮುಖ್ಯಾಧಿಕಾರಿ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಮೈಸೂರು ಅರಮನೆ ಸೇರಿ ಹಲವು ಬೊಂಬೆಗಳು ಪ್ರದರ್ಶನದಲ್ಲಿ ಇಡಲಾಗಿದೆ. ಮುತೆದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ,ಅಷ್ಟಮಿ, ನವಮಿ ತನಕ 9 ದಿನ ಪೂಜಿಸುತ್ತೇವೆ. > ಶ್ರುತಿ ರವಿಕುಮಾರ್​, ಗೃಹಿಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net