ಅಯೋಧ್ಯೆಯಲ್ಲಿ ಗೊಂಬೆಯಾಟ ಪ್ರದರ್ಶನ

Ayodya
Published on

ಹಳಿಯಾಳ: ಇಲ್ಲಿನ ಹೊಂಗಿರಣ ಸೂತ್ರದ ಗೊಂಬೆಯಾಟ ಕಲಾ ತಂಡವು ಅಯೋಧ್ಯೆಯಲ್ಲಿ ರಾಮಾಯಣದ ಪ್ರದರ್ಶನವನ್ನು ಗೊಂಬೆಯಾಟದ ಮೂಲಕ ನೀಡಿ ಜಿಲ್ಲೆಗೆ ಗೌರವ ಮತ್ತು ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಗೊಂಬೆಯಾಟದ ನಿರ್ದೇಶಕ ಶಿಕ್ಷಕ ಸಿದ್ದಪ್ಪ ಬಿರಾದಾರ ತಿಳಿಸಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನೆ ಅಂಗವಾಗಿ ಅಯೋಧ್ಯೆಯ ಶ್ರೀ ಅಯೋಧ್ಯಾ ಧಾಮ ಮುಖ್ಯ ವೇದಿಕೆಯಲ್ಲಿ ಜನವರಿ 22 ರಿಂದ ಮಾರ್ಚ್ 31ರವರೆಗೆ ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯ ಮತ್ತು ಉತ್ತರ ಪ್ರದೇಶದ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ಆಯೋಜನೆಗೊಂಡಿರುವ ಶ್ರೀರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಫೆ. 26ರಂದು ಸಂಜೆ ರಾಮಾಯಣದಲ್ಲಿ ಸೀತಾಪಹರಣ ಮತ್ತು ಶ್ರೀರಾಮ ಪಟ್ಟಾಭಿಷೇಕ ಪ್ರಸಂಗವನ್ನು ಸೂತ್ರದ ಗೊಂಬೆಯಾಟದ ಮೂಲಕ ಪ್ರದರ್ಶಿಸಲಾಗಿದೆ ಎಂದು ಬಿರಾದಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net