ದೊಡ್ಡಬಳ್ಳಾಪುರದಲ್ಲಿ ಬೊಂಬೆಗಳ ದರ್ಬಾರ್​

29 02 2025_BNG_RURAL_PAGE_8B
Published on

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದ ಹಲವು ಮನೆಗಳಲ್ಲಿ ದಸರಾ ದರ್ಬಾರ್​ ಜೋರಾಗಿದೆ. ಹಲವು ವರ್ಷಗಳಿಂದ ಇಲ್ಲಿನ ಜನತೆ ದಸರಾ ಬೊಂಬೆಗಳನ್ನು ಕುರಿಸುವ ಪದ್ಧತಿ ಅಳವಡಿಸಿಕೊಂಡಿದ್ದು, ಬೊಂಬೆ ನೋಡಲು ಮಕ್ಕಳ ದಂಡು ಆಗಮಿಸುವ ದೃಶ್ಯ ಸಾಮಾನ್ಯವಾಗಿದೆ.

ಬೊಂಬೆ ಮನೆಗಳಲ್ಲಿ ಬಂಧು ಮಿತ್ರರ ಸಂಭ್ರಮ, ಮನೆಗೆ ಬಂದ ಮಾತೆಯರಿಗೆ ಬಾಗಿನ ಸೇರಿ ಮೊದಲಾಗಿ ಬೊಂಬೆ ಹಬ್ಬದ ಸಂಭ್ರಮ ಕಂಡು ಬರುತ್ತಿದೆ. ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆ ಮಾಡಿ, ಪ್ರತಿನಿತ್ಯ ನೈವೇದ್ಯದೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಮರ್ಪಣೆಯಾಗುತ್ತಿದೆ.

ಹೈಟೆಕ್​ ಬೊಂಬೆ ಹಬ್ಬ: ದೇವಾನುದೇವತೆಗಳ ವಿವಿಧ ಬೊಂಬೆಗಳೊಂದಿಗೆ ಕೈಲಾಸ ಶಿವದರ್ಶನ ತಿರುಪತಿ ಬ್ರಷ್ಟೊತ್ಸವ, ಶ್ರೀಕೃಷ್ಣ ಪಾರಿಜಾತ, ದಶಾವತಾರ, ಪಾಂಡವರ ದರ್ಬಾರ್​, ಕುಂಭಕರ್ಣ, ತಿರುಪತಿ, ಗರುಡೋತ್ಸವ ಸೇರಿ ರಾಮಾಯಣ, ಮಹಾಭಾರತದ ಪ್ರಸಂಗಗಳ ಬೊಂಬೆಗಳು, ಮದುವೆ ದಿಬ್ಬಣದ ಬೊಂಬೆಗಳು, ಪಟ್ಟದಲ್ಲಿ ಕುಳಿತ್ತಿದ್ದರೆ, ದಸರಾ ಮೆರವಣಿಗೆ, ಮೈಸೂರು ಅರಮನೆ, ಗ್ರಾಮೀಣ ಆಚರಣೆಗಳ ಚಿತ್ರಣ, ಉದ್ಯಾನವನ, ಮೃಗಾಲಯ, ಕಾಡು, ಕೈಲಾಸ ಪರ್ವತ, ಅರಮನೆ, ದೇವಾಲಯ ಮೊದಲಾದ ವಿಶೇಷ ಆಯೋಜನೆಗಳು ಆಕರ್ಷಣೆಯಾಗಿವೆ. ಇದರೊಂದಿಗೆ ವಿವಿಧ ಚೈನಾ ಆಟಿಕೆಗಳು, ಪ್ಲಾಸ್ಟರ್​ ಆಫ್​ ಪ್ಯಾರಿಸ್​, ಫೈಜರ್​ ಬೊಂಬೆಗಳೂ ಇಣುಕುವುದರೊಂದಿಗೆ ಬೊಂಬೆ ಹಬ್ಬ ಹೈಟೆಕ್​ ಆಗಿದೆ. ನಗರದ ಶ್ರೀನಿವಾಸ ರಾವನ್​, ಟಿ.ಎಸ್​.ಉಮಾ ದೇವಿ ಮಹದೇವಯ್ಯ, ತ್ರಿವೇಣಿ ರವಿಶಂಕರ್​, ಪ್ರಭಾವತಿ, ದಯಾಶಂಕರ್​, ನಟರಾಜ್​, ಮಂಜುಳಾ ಮಂಜುನಾಥ್​, ಮಂಜಣ್ಣ, ಕಣಿತಹಳ್ಳಿ ದೇವರಾಜು, ರಾಂಪೂರ್​ ಶ್ರೀನಿವಾಸಯ್ಯ, ವೆಂಕಟೇಶ ಬಾಬು, ತೀಗ ಗೌತಮ್​ ಮೊದಲಾದವರ ಮನೆಗಳಲ್ಲಿ ಕೂರಿಸಿರುವ ಬೊಂಬೆಗಳು ಹೆಚ್ಚು ಗಮನ ಸೆಳೆಯುತ್ತಿವೆ.

ಹಬ್ಬದ ಹಿನ್ನೆಲೆ : ಗೊಂಬೆಗಳ ಸಂಪ್ರದಾಯ ಹಿಂದು ನಾಗರಿಕತೆಯ ಆರಂಭದಿಂದ ಬಂದಿದ್ದಾದರೂ ನವರಾತ್ರಿ, ಗೊಂಬೆ ಉತ್ಸವ ಮಾತ್ರ ರಾಜ ವಂಶಸ್ಥರಿಂದ ಆರಂಭವಾಗಿದೆ. ಆ ನಂತರ ಅದು ಅವರ ನಿಕಟವರ್ತಿಗಳಿಂದ ಆಚರಿಸಲ್ಪಟ್ಟು ಸಾರ್ವತ್ರಿಕವಾಗಿದೆ. ಗೊಂಬೆ ಉತ್ಸವವು ದಣ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಬಹುಶ@ ಇದಕ್ಕೆ ತಂಜಾವೂರು ಕಲೆಯ ಪ್ರಭಾವವಿದ್ದು, ವೈಷ್ಣವರು ಹೆಚ್ಚಾಗಿ ಆಚರಿಸುತ್ತಾರೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ದಸರಾಗೂ ಗೊಂಬೆಹಬ್ಬಕ್ಕೂ ಐತಿಹಾಸಿಕ ಆಚರಣೆಯ ನಂಟು ಜತೆಯಾಗಿಯೇ ಬಂದಿದೆ. ವಿಜಯನಗರ ಅರಸರಿಂದ ದಸರಾ ಆಚರಣೆ ಆರಂಭವಾಯಿತು. ಆ ಕಾಲಕ್ಕೆ ಗೊಂಬೆ ಉತ್ಸವ ಆರಂಭವಾಗಿ, ಹೆಣ್ಣು ಮಕ್ಕಳು ರಾಜ ಮಂತ್ರಿ ಆಸ್ಥಾನದವರ ಪ್ರತಿಕವಾಗಿ ಬೊಂಬೆಗಳನ್ನು ಕೂರಿಸಿ, ಸಾಂಸತಿಕ ಜೀವಂತಿಕೆಗೆ ಗೊಂಬೆ ಹಬ್ಬ ಆಶಾಕಿರಣ. ಹಿಂದೆ ನವರಾತ್ರಿ ಒಂದು ತಿಂಗಳಿದ್ದಂತೆ ಹಾದಿ ಬೀದಿಗಳಲ್ಲಿ ದಸರಾಗಾಗಿಯೇ ಗೊಂಬೆಗಳ ಮಾರಾಟದ ಭರಾಟೆ ಕಂಡು ಬರುತ್ತಿತ್ತು. ಆದರೆ, ಇದೀಗ ಭರಾಟೆ ಕಡಿಮೆಯಾಗಿದೆ.

ಸಾಂಸ್ಕೃತಿಕ ಜೀವಂತಿಕೆ : ಗೊಂಬೆಗಳ ಬೆಲೆಗಳೂ ಹೆಚ್ಚಾಗಿವೆ. ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಪಾರಂಪರಿಕ ಆಚರಣೆ, ಜನಪದ ಸಂಪ್ರದಾಯಗಳು ಮರೆಯಾಗುತ್ತಿವೆ. ಇದಕ್ಕೆ ಗೊಂಬೆ ಹಬ್ಬವೂ ಹೊರತಲ್ಲ. ಇಂತಹ ಸಂದರ್ಭದಲ್ಲಿಯೂ ಸಂಪ್ರದಾಯ ಮರೆಯದ ಮಂದಿ ಗೊಂಬೆಹಬ್ಬ ಆಚರಣೆ ಮಾಡುತ್ತಿರುವುದು ಸಾಂಸ್ಕೃತಿಕ ಜೀವಂತಿಕೆಗೆ ಆಶಾಕಿರಣ. ಸಾಮರಸ್ಯಕ್ಕೆ ಮೆರುಗು ನೀಡುವ ಇಂತಹ ಅರ್ಥಪೂರ್ಣ ಆಚರಣೆಗಳನ್ನು ಉಳಿಸಿ ಬೆಳೆಸಬೇಕಿರುವ ಹೊಣೆ ಇಂದಿನ ಪೀಳಿಗೆಗೆ ಇದೆ ಎಂದು ಹಿರಿಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net