

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಅರಿಶಿಣಕುಂಟೆ ಗ್ರಾಮದಲ್ಲಿ ಧಾರ್ಮಿಕ ತಾಣವೆಂದು ಪ್ರಸಿದ್ಧವಾಗಿರುವ ವಿಶ್ವ ಶಾಂತಿ ಆಶ್ರಮದಲ್ಲಿ ಸದ್ಗುರು ಸಂತ ಭದ್ರಗಿರಿ ಶ್ರೀ ಕೇಶವದಾಸರ 26ನೇ ಪುಣ್ಯಾರಾಧನಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ.
ಆಶ್ರಮದ ಪಾಂಡುರಂಗ ಸಭಾ ಭವನದಲ್ಲಿ ದಾಸಕೀರ್ತನಾ ಮಹಿಳಾ ಮಂಡಳಿಯಿಂದ ಭಜನೆ ಹಾಗೂ ಭಕ್ತಿಗೀತೆಗಳು, ವಿದುಷಿ ಭಾರತಿ ಸಮೀರಾ ಅವರ ನೃತ್ಯಧಾಮ ಕಲಾಕೇಂದ್ರದಿಂದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭರತನಾಟ್ಯ ನಡೆಸಿಕೊಟ್ಟರು. ಬಳಿಕ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಟ್ರಸ್ಟ್ ಅಧ್ಯಕ್ಷೆ ರಮಾ ಕೇಶವದಾಸ ಅವರು ಮಾತನಾಡಿ, ನಡೆ-ನುಡಿಯಲ್ಲಿ ದೈವಿಕತೆ ತುಂಬಿಕೊಂಡಿದ್ದ ಶ್ರೀ ಕೇಶವದಾಸರು ಮೊದಲು ವ್ಯಕ್ತಿಯಾಗಿ ಕಂಡಿದ್ದು, ಈಗ ಶಕ್ತಿಯಾಗಿ ಪರಿವರ್ತನೆಯಾಗಿದ್ದಾರೆ. ಅನೇಕ ಮಂದಿಯ ದುಗುಡ ದುಮ್ಮಾನ ಹಾಗೂ ಸಂಶಯ ಪರಿಹರಿಸುವ ಕೆಲಸ ಮಹಾತ್ಮರಿಂದ ಆಗಿದೆ. ಅವರು, ಅಗಲಿದ್ದರೂ ಅವರು ಕೊಡುಗೆಯಾಗಿ ನೀಡಿರುವ ದಿವ್ಯಸಂದೇಶಗಳು ಅಮರವಾಗಿವೆ. ರಾಮನಾಮ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ ಎಂದರು.
ಪುಣ್ಯಾರಾಧನೆ ಪ್ರಯುಕ್ತ ಭಜನೆ ಮಾಡಿದ್ದಲ್ಲದೆ, ಸಂತ ಭದ್ರಗಿರಿ ಶ್ರೀ ಕೇಶವದಾಸರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಟ್ರಸ್ಟ್‌ನಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.