ಪುಣ್ಯಪಾದ ಸಂಕೀರ್ತನಾ ಮಂದಾರ್ತಿ ಪಾದಯಾತ್ರೆ

mandarthi
Published on

ಕೊಕ್ಕರ್ಣೆ: ಸಂಕೀರ್ತನಾ ಮಂದಾರ್ತಿ 108 ತಂಡಗಳ ರಾಷ್ಟ್ರಮಟ್ಟದ ಕುಣಿತ ಭಜನಾ ಸ್ಪರ್ಧೆ ಜ.18ರಂದು ಮಂದಾರ್ತಿಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಶ್ರೀಕ್ಷೇತ್ರ ಮಂದಾರ್ತಿಗೆ ಭಜನಾ ತಂಡ ಹಾಗೂ ಭಕ್ತರ ಕೂಡುವಿಕೆಯೊಂದಿಗೆ ಪುಣ್ಯಪಾದ ನಮ್ಮ ನಡಿಗೆ ಅಮ್ಮನೆಡೆಗೆ ಎನ್ನುವ ಕಾರ್ಯಕ್ರಮ ನಡೆಯಿತು.

ನೀಲಾವರದಿಂದ ಹೊರಟ ಪುಣ್ಯಪಾದ ತಂಡವನ್ನು ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಹಾಗೂ ಕೂರಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು ಗ್ರಾಮಸ್ಥರೊಡನೆ ಭಜನೆ ಮೂಲಕ ಸ್ವಾಗತಿಸಿದರು. ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಸಂಕೀರ್ತನಾ ಮಂದಾರ್ತಿ ಯಶಸ್ವಿಯಾಗಲೆಂದು ಪೂಜೆ ಸಲ್ಲಿಸಲಾಯಿತು.

ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶೇಖರ್ ಹೆಗ್ಡೆ ಕೂರಾಡಿ, ಪ್ರಧಾನ ಅರ್ಚಕ ರಾಮಯ್ಯ, ಆಡಳಿತ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ ಕೂರಾಡಿ, ಹನೆಹಳ್ಳಿ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾ ಪೂಜಾರಿ, ಕೂರಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಪ್ರದೀಪ್ ಮರಕಾಲ ಕೂರಾಡಿ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷ ಜಯಂತಿಯಮ್ಮ, ನಡೂರು ಭಜನಾ ಮಂಡಳಿಯ ಪ್ರಮುಖರಾದ ರವಿ ಶೆಟ್ಟಿ ನಡೂರು, ಬಾಲಕೃಷ್ಣ ಗುಡ್ಡೆಯಂಗಡಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಕೂರಾಡಿಯಿಂದ ಹೊರಟ ಪಾದಯಾತ್ರೆ ತಂಡ ನಡೂರು, ಗುಡ್ಡೆಯಂಗಡಿ, ತಂತ್ರಾಡಿ ಮೂಲಕ ಶ್ರೀ ಕ್ಷೇತ್ರ ಮಂದಾರ್ತಿಯವರೆಗೆ ಪ್ರಚಾರ ಕಾರ್ಯ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net