ಗಾಯಗೊಂಡಿದ್ದ ಪುನುಗು ಬೆಕ್ಕು ರಕ್ಷಣೆ

9spt3
ಸೋಮವಾರಪೇಟೆ ಸಮೀಪದ ಬಳಗುಂದ ಗ್ರಾಮದ ಸುರೇಂದ್ರ ಅವರ ಮನೆಯಲ್ಲಿ ಸೇರಿಕೊಂಡಿದ್ದ ಪುನುಗು ಬೆಕ್ಕನ್ನು ಅರಣ್ಯ ಇಲಾಖೆಗೆ ನೀಡಲಾಯಿತು.
Published on

ಸೋಮವಾರಪೇಟೆ: ಗಾಯಗೊಂಡಿದ್ದ ಪುನುಗು ಬೆಕ್ಕನ್ನು ರೈತರೊಬ್ಬರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಬಳಗುಂದ ಗ್ರಾಮದ ಬಿ.ಸಿ.ಸುರೇಂದ್ರ ಅವರ ಮನೆಗೆ ಅಪರೂಪದ ಪುನುಗು ಬೆಕ್ಕು ಬಂದು ಸೇರಿಕೊಂಡಿತ್ತು. ಕಾಡಿಗೆ ಕಳುಹಿಸುವ ಪ್ರಯತ್ನ ಮಾಡಿದರೂ, ಮಾರನೇ ದಿನವೂ ವಾಪಸ್ ಮನೆಗೆ ಬಂದಿದೆ. ಪುನುಗು ಬೆಕ್ಕಿನ ಕುತ್ತಿಗೆ ಭಾಗದಲ್ಲಿ ಗಾಯ ಗಮನಿಸಿದ ಸುರೇಂದ್ರ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೇಳೂರು ಉಪವಲಯದ ಡಿಆರ್‌ಎಫ್‌ಒ ನಾರಾಯಣ ಮೂಲ್ಯ ಮತ್ತು ಸಿಬ್ಬಂದಿ ಪುನಗು ಬೆಕ್ಕಿಗೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net