ಯುವ ವಕೀಲನ ಮೇಲೆ ದೌರ್ಜನ್ಯ ಪ್ರಕರಣ- ಪುಂಜಾಲಕಟ್ಟೆ ಪಿಎಸ್‌ಐ ಅಮಾನತು

Published on

ಮಂಗಳೂರು: ಯುವ ವಕೀಲ ಕುಲದೀಪ್ ಎಂಬುವರ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣೆ ಪಿಎಸ್‌ಐ ಸುತೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.

ದೌರ್ಜನ್ಯ ಖಂಡಿಸಿ ವಕೀಲರ ಸಂಘ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ, ಪಿಎಸ್‌ಐ ಅಮಾನತಿಗೆ ಆಗ್ರಹಿಸಿತ್ತು. ಎಸ್‌ಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸುವಂತೆ ವಕೀಲರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದರು.

ಸುತೇಶ್ ಕುಮಾರ್ ಅವರು ಕುಲದೀಪ್ ಅವರನ್ನು ಸಿವಿಲ್ ಪ್ರಕರಣಕ್ಕೆ ಸಂಬAಧಿಸಿದ ವ್ಯಾಜ್ಯದಲ್ಲಿ ಅವರ ಮನೆಯಿಂದ ರಾತ್ರಿ ವೇಳೆ ಬಂಧಿಸಿ ಕರೆದೊಯ್ದಿದ್ದರು. ದಾರಿ ನಡುವೆ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಕೆಲವು ದಿನಗಳ ಹಿಂದೆ ಪುಂಜಾಲಕಟ್ಟೆಯಿAದ ಅವರನ್ನು ಎಸ್‌ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net