

ಕೊಳ್ಳೇಗಾಲ : ಮುಡಿಗುಂಡ ಬಡಾವಣೆಯಲ್ಲಿ ರಾಜವಂಶದ ಅಭಿಮಾನಿ ಬಳಗದ ಪದಾಧಿಕಾರಿಗಳು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಎರಡನೇ ವರ್ಷದ ಪುಣ್ಯ ತಿಥಿಯನ್ನು ಆಚರಿಸಿದರು. ಬಡಾವಣೆಯ ಬಸ್ ನಿಲ್ದಾಣದ ಬಳಿ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಎರಡು ನಿಮಿಷ ಕಾಲ ಮೌನ ಆಚರಿಸಲಾಯಿತು. ರಾಜವಂಶದ ಅಭಿಮಾನಿ ಬಳಗದ ಮುಳ್ಳೇಶ್, ಕಣ್ಣನ್, ಸುರೇಶ್, ಶಂಕರ್, ನಿಂಗಣ್ಣ, ಕುಮಾರ್, ಗೋಪಿ ನಗರಸಭೆ ಸದಸ್ಯ ಶಂಕರನಾರಾಯಣ ಗುಪ್ತ, ಮುಖಂಡರಾದ ರಂಗಜೋಳಿಗೆ ಸಂಸ್ಥೆ ಅಧ್ಯಕ್ಷ ಮೂರ್ತಿ ಮುಡಿಗುಂಡ, ಮಹೇಶ್ ಬೆಂಡರಹಳ್ಳಿ, ರಾಜೇಶ್, ಶಾಂತರಾಜು ಬಸ್ತೀಪುರ ಮತ್ತಿತರಿದ್ದರು.