

ಮಂಗಳೂರು: ಪುನೀತ್ ರಾಜಕುಮಾರ್ ಜನ್ಮ ದಿನ(ಮಾ. 17)ವನ್ನು ಸರ್ಕಾರ ಸ್ಫೂರ್ತಿ ದಿನವನ್ನಾಗಿ ಸರ್ಕಾರ ಘೋಷಿಸಿದ್ದು, ಇದರ ಅಂಗವಾಗಿ ಕೆ.ಆರ್.ಜನಾರ್ದನ ಬಾಬು ಸಾರಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಪುನೀತ್ ಗಾನ ರತ್ನ ಸ್ಪರ್ಧೆಯಲ್ಲಿ ಮಂಗಳೂರಿನ ಯು.ಕೆ. ಶಾಝಿಲ್ ಹಸನ್ ತೃತೀಯ ಸ್ಥಾನ ಪಡೆದಿದ್ದಾರೆ. 5000 ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕಗಳನ್ನು ರಾಜಕುಮಾರ್ ಕುಟುಂಬದ ಹಿರಿಯರಾದ ಚಿನ್ನೇಗೌಡರಿಂದ ಸ್ವೀಕರಿಸಿದರು. ಶಾಝಿಲ್ ನಗರದ ನೇಷನಲ್ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಯು.ಎಚ್.ಖಾಲಿದ್ ಉಜಿರೆ ಮತ್ತು ಶಬಾನಾ ದಂಪತಿ ಪುತ್ರ.