ಕುಶಾಲನಗರದಲ್ಲಿ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ

punith
Published on

ಕುಶಾಲನಗರ:

ತಮ್ಮ ಅಭಿನಯ ಮತ್ತು ಹೃದಯ ಶ್ರೀಮಂತಿಕೆಯಿAದಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿದ್ದಾರೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರದ ಜನತಾ ಕಾಲೋನಿ ಸರ್ಕಲ್‌ನಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 3 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಪುನೀತ್ ಸದ್ದಿಲ್ಲದೆ ಮಾಡುತ್ತಿದ್ದ ಜನಪರ ಕೆಲಸಗಳು ಅವರನ್ನು ಇಂದಿಗೂ ಜೀವಂತವಾಗಿಟ್ಟಿದೆ. ಹಾಗಾಗಿ ಅವರೊಬ್ಬ ಮಾದರಿ ನಟ ಎಂದರು. ಪುನೀತ್ ಅಭಿಮಾನಿ ಬಳಗದ ಪ್ರಮುಖರಾದ ಸಚಿನ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಸಮಾಜಮುಖಿ ಕಾರ್ಯಗಳು ಸ್ಮರಣೀಯ. ಅವರಂತೆ ಎಲ್ಲರೂ ಸಹಾಯಗುಣಗಳನ್ನು ಬೆಳೆಸಿಕೊಂಡು ಇತರರಿಗೂ ಸ್ಫೂರ್ತಿಯಾಗಬೇಕಿದೆ. ಅಪ್ಪು ಸದಾ ಜನಮಾನಸದಲ್ಲಿದ್ದಾರೆ ಪ್ರತಿನಿತ್ಯವೂ ಅವರ ನೆನಪುಗಳು ಮನಸ್ಸಿನಲ್ಲಿ ಮನೆ ಮಾಡಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನಿಷ್ಠಾನ ಸಮಿತಿ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಪುರಸಭೆ ನಾಮನಿರ್ದೇಶಿತ ಸದಸ್ಯ ನವೀನ್, ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಪ್ರಮುಖರಾದ ಶಿವರಾಜ್ ನಾಯಕ್, ಸಂತೋಷ್, ಇಮ್ರಾನ್, ಸಚಿನ್, ಲೋಕೇಶ್, ದರ್ಶನ್, ಗಿರೀಶ್, ವೇಣು, ಮಹೇಶ್, ರಮೇಶ್, ಶಿವಮಾದು ಜೀವನ್ ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net