

ಹುಬ್ಬಳ್ಳಿ: ನಗರದಲ್ಲಿ ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಪುನೀತ ಉತ್ಸವ -2 ಕಾರ್ಯಕ್ರಮದಲ್ಲಿ ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಅವರಿಗೆ ಇತ್ತೀಚೆಗೆ ಪುನೀತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಂಎಲ್‌ಸಿ ಪ್ರದೀಪ ಶೆಟ್ಟರ್ ಅವರು ಸಂತೋಷ ವೆರ್ಣೇಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಮುಖರಾದ ಡಾ
ವಿದ್ಯಾ ಜೋಶಿ, ಕೇಶವ ನಾಡಕರ್ಣಿ, ರಮೇಶ ಮಹದೇವಪ್ಪನವರ, ವೀಣಾ ಬಿರಾದಾರ, ಈರಣ್ಣ ವಾಲಿಕಾರ, ನಾಗರಾಜ ತೇಲಗೇರಿ, ಇಷ್ಟಲಿಂಗಪ್ಪ ಪಾವಟೆ, ಶ್ರೀಧರ ಪೂಜಾರ, ಮಲ್ಲೇಶ ಸೂರಣಗಿ ಇತರರು ಇದ್ದರು.