ಪುನಿತ್ ರಾಜಕುಮಾರ ಸ್ಮರಣೆ 29ರಂದು,  ಅಭಿಮಾನಿ ಬಳಗದಿಂದ ವಿಧಾಯಕ ಕಾರ್ಯಕ್ರಮ

Published on

ಹುಬ್ಬಳ್ಳಿ: ಡಾ. ಪುನೀತ್ ರಾಜಕುಮಾರ ಪುಣ್ಯಸ್ಮರಣೆ ನಿಮಿತ್ತ ಅ. 29ರಂದು ಸಂಜೆ 4ಕ್ಕೆ ಇಲ್ಲಿಯ ನವನಗರದ ಅಭಿಮಾನಿಗಳ ಬಳಗದ ವತಿಯಿಂದ ವಿವಿಧ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಸುನೀಲ ರೇವಣಕರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲಾ ಮಟ್ಟದ ಹಾಡಿನ ಸ್ಪರ್ಧೆ ಹಾಗೂ ವೃದ್ಧರಿಗೆ ಬಟ್ಟೆ ವಿತರಣೆ, ನೂರು ಗೋವುಗಳಿಗೆ ಮೇವು ನೀಡುವುದು ಮತ್ತು ಸಾಧಕ ಮಹನೀಯರಿಗೆ ಡಾ. ಪುನೀತ್ ರಾಜರತ್ನ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ ಎಂದರು.

ಹಾಡಿನ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸುವವರಿಗಾಗಿ ಆಡಿಷನ್ ಆರಂಭವಾಗಿದೆ. ಅ. 26, 27ರಂದು ನಡೆಯುವ ಆಡಿಷನ್ನಲ್ಲಿ ಆಸಕ್ತರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಆಸಕ್ತರು, ಮಲ್ಲಯ್ಯಜ್ಜ ಹಿರೇಮಠ, ಸುನೀಲ ಬಾಗಲೆ ಅವರನ್ನು ಸಂಪಕಿರ್ಸಲು ಕೋರಲಾಗಿದೆ. ಬಳಗದ ಸಹ ಕಾರ್ಯದರ್ಶಿ ಕುಶಾಲ ಅವಲಕ್ಕಿ, ಅಲೀಸಾಬ ನದಾಫ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net