

ಮುಂಡಗೋಡ: ಬೆಂಗಳೂರಿನ ಹಿರಿಯ ವಕೀಲ ವೈ.ಆರ್. ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ತಾಲೂಕು ವಕೀಲರ ಸಂಘದವರು ಕಪ್ಪುಪಟ್ಟಿ ಕಟ್ಟಿಕೊಂಡು ಉಪತಹಸೀಲ್ದಾರ್ ಜಿ.ಬಿ. ಭಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಹಿರಿಯ ವಕೀಲರ ಮೇಲಿನ ಹಲ್ಲೆ ಬಗೆಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ವಕೀಲರಾದ ನಂದೀಶ ನಿಂಬಾಯಿ, ಸಂಗಮೇಶ ಕೋಳ್ಳಾನವರ, ಎಸ್.ಎಂ. ಮಲವಳ್ಳಿ, ಜ್ಯೋತಿ ಪಾಟೀಲ,ನಟರಾಜ ಕಾತೂರ, ಸಲೀಂ ನಂದಿಗಟ್ಟಿ, ಬಿ.ಎಫ್. ಪೂಜಾರ, ರಾಜು ಹಂಚಿನಮನಿ, ನಂದೀಶ ನಿಂಬಾಯಿ, ರಾಜಶೇಖರ ಹುಬ್ಬಳ್ಳಿ, ಇತರರಿದ್ದರು.