ಬದುಕು, ಸಾಧನೆ ಹೊಸ ತಲೆಮಾರಿಗೆ ಪರಿಚಯ : ಡಾ.ಶ್ರೀನಿಧಿ ಸರಳಾಯ ಸಲಹೆ

New Project (43)
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ತುಳು ಭಾಷೆ, ಸಂಸ್ಕೃತಿ, ಜನಪದಗಳ ಬಗ್ಗೆ ಆಳ ಅರಿವುಳ್ಳವರಾಗಿ, ನಶಿಸಿ ಹೋಗಿದ್ದ ಲಿಪಿಯನ್ನು ಮತ್ತೆ ಪ್ರವರ್ಧಮಾನಕ್ಕೆ ತಂದು ತುಳು ಲಿಪಿ ಬ್ರಹ್ಮರೆನಿಸಿದ ದಿ.ಪುಣಿಂಚಿತ್ತಾಯರ ಬದುಕು- ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ತುಳು ಆಯನ ಕೂಟ ಮಾಜಿ ಕಾರ್ಯದರ್ಶಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಹೇಳಿದರು.

ತುಳುವೆರೆ ಆಯನೊ ಕೂಟ ಬದಿಯಡ್ಕ ವತಿಯಿಂದ ಬದಿಯಡ್ಕದಲ್ಲಿ ಶುಕ್ರವಾರ ತುಳು ಲಿಪಿಬ್ರಹ್ಮ ದಿ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಹುಟ್ಟುಹಬ್ಬದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಳುವೆರೆ ಆಯನೊ ಕೂಟದ ಜಗನ್ನಾಥ ರೈ ಕೊರೆಕ್ಕಾನ, ದಿ.ಪುಣಿಂಚಿತ್ತಾಯರ ಪುತ್ರ ವಿಜಯರಾಜ ಪುಣಿಂಚಿತ್ತಾಯ, ಜೈ ತುಳುನಾಡ್ ಕಾಸರಗೋಡು ಸಮಿತಿ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು, ಉತ್ತಮ ಕಾಸರಗೋಡು, ದೀಕ್ಷಿತ್ ಬದಿಯಡ್ಕ, ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು, ರಾಘವೇಂದ್ರ ಕಾಮತ್ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಯುವ ಸೇನಾನಿ ಅಕ್ಷಯ ಕುಮಾರ್ ಕಾಡಮನೆ ಅವರನ್ನು ಗೌರವಿಸಲಾಯಿತು. ತುಳುವೆರೆ ಆಯನೊ ಕೂಟದ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net