ಪುಣಿಂಚಿತ್ತಾಯ ಜನ್ಮ ದಿನಾಚರಣೆ

New Project (25)
Published on

ಬದಿಯಡ್ಕ: ಜೈ ತುಲುನಾಡ್ ಕಾಸ್ರೋಡು ಸಮಿತಿ ಮತ್ತು ವಿದ್ಯಾರಂಗ ಸಾಹಿತ್ಯ ವೇದಿಕೆ ಯು.ಪಿ. ವಿಭಾಗ, ನವಜೀವನ ಹೈಯರ್ ಸೆಕೆಂಡರಿ ಶಾಲೆ ಆಶ್ರಯದಲ್ಲಿ ಶುಕ್ರವಾರ ದಿ.ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಜನ್ಮದಿನವನ್ನು ವಿಶ್ವ ತುಳು ಲಿಪಿ ದಿನವಾಗಿ ಪೆರಡಾಲ ಶಾಲೆಯಲ್ಲಿ ಆಚರಿಸಲಾಯಿತು.

ಮುಖ್ಯ ಶಿಕ್ಷಕಿ ಮಿನಿ ಕಾರ್ಯಕ್ರಮ ಉದ್ಘಾಟಿಸಿದರು. ಜೈ ತುಳುನಾಡ್ ಕೇಂದ್ರ ಸಮಿತಿ ಉಪಾಧ್ಯಕ್ಷೆ ವಿನೋದಾ ಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು.

ತುಳುಲಿಪಿ ಬರವುದ ಪಂಥೊದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಜಯರಾಜ ಪುಣಿಂಚಿತ್ತಾಯ ಪುಂಡೂರು, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಅಧ್ಯಾಪಕರಾದ ನಿರಂಜನ್ ರೈ ಪೆರಡಾಲ, ಉತ್ತಮ್, ಪವಿತ್ರಾ ಮಾಡ, ಕುಶಲಾಕ್ಷಿ ಕಣ್ವತೀರ್ಥ ಮೊದಲಾದರಿದ್ದರು. ಜೈ ತುಳುನಾಡ್ ಕಾಸರಗೋಡು ಸಮಿತಿ ಕೋಶಾಧಿಕಾರಿ ಶ್ರೀನಿವಾಸ ಆಳ್ವ ಸ್ವಾಗತಿಸಿದರು. ಶಿಕ್ಷಕಿ ಪ್ರಭಾವತಿ ಕೆದಿಲಾಯ ನಿರೂಪಿಸಿದರು. ಜೈ ತುಳುನಾಡ್ ಕಾಸ್ರೋಡ್ ಸಮಿತಿ ಕಾರ್ಯದರ್ಶಿ ಹರಿಕಾಂತ ಕಾಸರಗೋಡು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net