

ಮೈಸೂರು: ಪುನೀತ್‌ರಾಜಕುಮಾರ್ 50ನೇ ಹುಟ್ಟು ಹಬ್ಬದ ನೆನಪಿಗಾಗಿ ನಗರದಲ್ಲಿ ಅಭಿಮಾನಿಗಳಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಮಾತನಾಡಿ, ಯುವ ಜನಾಂಗಕ್ಕೆ ಪುನೀತ್ ರಾಜಕುಮಾರ್ ಪ್ರೇರಣೆ ಆಗಿದ್ದರು. ಅವರು ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆ, ಮಕ್ಕಳಿಗೆ ಉಚಿತ ಶಿಕ್ಷಣ, ಗೋಶಾಲೆ ಸೇರಿದಂತೆ ನಾನಾ ಸಮಾಜಮುಖಿ ಕಾರ್ಯಗಳ ಮೂಲಕ ಮುಂದಿನ ಪೀಳಿಗೆಗೆ ಮಾದರಿ ಎಂದು ಹೇಳಿದರು.
ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ್ ಮರಟಿಕ್ಯಾತನಹಳ್ಳಿ ಮಾತನಾಡಿ, ಅಪ್ಪು ಅವರು ಬಾಲ್ಯದಲ್ಲೇ ತಮ್ಮ ಬಾಲನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿದರು. ವಿಶೇಷವಾಗಿ ಯಾವುದೇ ಹಣ ಪಡೆಯದೆ ಕೆಎಂಎಫ್ ‘ನಂದಿನಿ’ ಉತ್ಪನ್ನಗಳ ರಾಯಭಾರಿ ಆಗಿ ರೈತರನ್ನು ಪ್ರೋತ್ಸಾಹಿಸಿದ್ದು ಒಂದು ವಿಶೇಷ ಕಾರ್ಯ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಮೇಶ್ ರಾಮಪ್ಪ, ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ನಗರ ಯುವ ಕಾಂಗ್ರೆಸ್‌ಉಪಾಧ್ಯಕ್ಷ ನವೀನ್ ಕೆಂಪಿ, ಕಾನೂನು ವಿಭಾಗದ ಅಧ್ಯಕ್ಷ, ಹಿರಿಯ ವಕೀಲ ಜಯಲಕ್ಷ್ಮಣ, ಮುಖಂಡರಾದ ಎಸ್.ಎಸ್. ವೈದ್ಯನಾಥ್, ಲೋಕೇಶ್, ರಾಜು, ವಾರದರಾಜು, ಪಾಂಡು ಇತರರು ಇದ್ದರು.