ವಿಜಯಪುರದಲ್ಲಿ ಪುನೀತ್ ರಾಜಕುಮಾರ್‌ರ ಪ್ರಥಮ ಪುಣ್ಯಸ್ಮರಣೆ

WhatsApp Image 2022-10-29 at 2.46.58 PM
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಜಿಲ್ಲಾ ಘಟಕದ ವತಿಯಿಂದ ಶನಿವಾರ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು. ಶೇಷರಾವ ಮಾನೆ, ಭೀಮಾಶಂಕರಯ್ಯ ವಿರಕ್ತಮಠ, ಕೆ.ಕೆ. ಬನ್ನಟ್ಟಿ, ಎಸ್.ಎಂ. ಟಂಗೊಳ್ಳಿ, ಸಂತೋಷ ಕಮತಗಿ ಮತ್ತಿತರರಿದ್ದರು.
Published on

ವಿಜಯಪುರ :ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಜಿಲ್ಲಾ ಘಟಕದ ವತಿಯಿಂದ ಶನಿವಾರ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ನಟ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಕಡುಬಡವರ ನಿರಾಶ್ರಿತರ, ಅಂಗವಿಕಲರಿಗೆ ದಾರಿದೀಪವಾಗಿದ್ದರು. ಅಷ್ಟೆ ಅಲ್ಲ ನಾಡಿನ ವೃದ್ಧಾಶ್ರಮ, ಅನಾಥಶ್ರಮ, ಶಾಲಾ ಕಾಲೇಜುಗಳಿಗೆ ಸಹಾಯಧನ ರೂಪದಲ್ಲಿ ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ ಅವರು ಮಾಡಿರುವ ಪುಣ್ಯದ ಕೆಲಸಗಳು ಅವರು ತೀರಿದ ಬಳಿಕವೇ ಬಹಿರಂಗಗೊಂಡಿರುವುದು ಅಪರೂಪದ ಸಂಗತಿ ಎಂದು ಸ್ಮರಿಸಿದರು.
ಡಾ.ರಾಜ್‌ಕುಮಾರ್ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿದ್ದರೆ, ಕರ್ನಾಟಕ ರತ್ನ ಪುನೀತ್ ಕನ್ನಡ ನಾಡಿನ ಜನಮನದಲ್ಲಿ ಮನೆಮಾತಾಗಿ ಉಳಿದಿರುವುದು ಅಷ್ಟೆ ಅಲ್ಲ. ಸೂರ್ಯ-ಚಂದ್ರರು ಇರುವವರೆಗೆ ಅವರ ಹೆಸರು ಅಜರಾಮರವಾಗಿರುತ್ತದೆ ಎಂದರು.

ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಭೀಮಾಶಂಕರಯ್ಯ ವಿರಕ್ತಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಎಸ್.ಎಂ. ಟಂಗೊಳ್ಳಿ, ಸಂತೋಷ ಕಮತಗಿ, ಪವಿತ್ರಾ ಭೋಸಲೆ, ವಿಜಯಲಕ್ಷ್ಮೀ ಬೋಸಗಿ, ಸುಜಾತಾ ಮನ್ನಿಕೇರಿ, ಸವಿತಾ ನಿಂಬರಗಿ, ಎಸ್.ಎಚ್. ಪಾಟೀಲ, ಸಚಿನ್ ಚವ್ಹಾಣ, ಸಚಿನ್ ಡೋಣೂರ, ಶಿವರಾಜ ಕಿನ್ನೂರಿ, ಮಲಸರ್ಜಾ ಬುಡ್ಡಿನ, ಸಿದ್ರಾಮ ಮಾನೆ, ಶ್ರೀನಿವಾಸ ಚಲವಾದಿ. ಈಶ್ವರ ಪರೀಟ, ಇಲಾಯಿ ಅಕ್ಕಲಕೋಟ, ವಾಣಿಶ್ರೀ ಕುಲಕರ್ಣಿ, ಮನೋರಮಾ ಜೋಶಿ, ರಾಮಚಂದ್ರ ಹುಬ್ಬಳ್ಳಿ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net