ಹೊಸಕೋಟೆಯಲ್ಲಿ ಪುನೀತ್ ರಾಜಕುಮಾರ್ ಕಪ್ ಕ್ರಿಕೆಟ್ ಪಂದ್ಯಾವಳಿ

hosakote
Published on

ಬೆಂಗಳೂರು: ಡಾ.ಪುನಿತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಹೊಸಕೋಟೆಯ ಸ್ನೇಹಲೋಕ ಅಕಾಡೆಮಿ ಸಂದೀಪ್ ಕುಮಾರ್ ನೇತೃತ್ವದಲ್ಲಿ ರಾಂಪುರ ಸಮೀಪದ ಎಸ್.ಎಲ್.ಎನ್ ಕ್ರೀಡಾಂಗಣದಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿತ್ತು.

ಪಂದ್ಯಾವಳಿಯಲ್ಲಿ ಹೊಸಕೋಟೆಯ ಸ್ನೇಹ ಲೋಕ ತಂಡ, ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಹಾಗೂ ರಾಜು ಗೌಡ ನೇತೃತ್ವದ ಡಿ.ಎಸ್.ಮ್ಯಾಕ್ಸೃ್ ತಂಡ, ಮಾಧ್ಯಮದ ಸ್ಟಾರ್ ರಿಪೋರ್ಟರ್ಸ್9 ತಂಡ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂದೀಪ್ ಕುಮಾರ್, ಪ್ರತಿಯೊಬ್ಬರಿಗೂ ಕ್ರೀಡೆ ಬಹಳ ಮುಖ್ಯ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯ ಆರೋಗ್ಯವಂತನಾಗಿರಲು ಸಹಕಾರಿಯಾಗುತ್ತದೆ. ಹಲವಾರು ಕ್ರೀಡಾ ಪಟುಗಳು ಒಂದೆಡೆ ಸೇರುವುದರಿಂದ ಸ್ನೇಹ ಬೆಳೆಯುತ್ತದೆ. ಕಳೆದ 11 ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪುನೀತ್ ರಾಜಕುಮಾರ್ ಹೆಸರಿನ ಕಪ್‌ನೊಂದಿಗೆ ಕ್ರೀಡಾಕೂಟ ನಡೆಸಲಾಗುತ್ತಿದೆ ಎಂದರು. ಪಂದ್ಯದಲ್ಲಿ ಪ್ರಥಮ ಬಹುಮಾನ ಸ್ಟಾರ್ ರಿಪೋರ್ಟರ್ಸ್ ತಂಡ, ದ್ವಿತೀಯ ಬಹುಮಾನ ಡಿ.ಎಸ್.ಮ್ಯಾಕ್ಸ್ ತಂಡ ಹಾಗೂ ಸಮಾಧಾನಕರ ಬಹುಮನ ಸ್ನೇಹ ಲೋಕ ತಂಡ ಪಡೆಯಿತು.

ಡಾ.ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಹೊಸಕೋಟೆಯ ಸ್ನೇಹಲೋಕ ಅಕಾಡಮಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿರ್ದೇಶಕ ತರುಣ್ ಸುಧೀರ್, ಮಾಜಿ ಸಚಿವ ರಾಜುಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net