ರಂಗೋಲಿಯಲ್ಲಿ ಅರಳಿದ ಪುನೀತ್ ರಾಜ್‌ಕುಮಾರ್!

7
Published on

ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಐವರು ಕಲಾವಿದರ ತಂಡ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಅವರ ಬೃಹತ್ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

ನಗರದ ಚೇತನ್ ರಾಜ್ ಅವರ ಮಾರ್ಗದರ್ಶನದಲ್ಲಿ ಐವರು ಕಲಾವಿದರು ಈ ಚಿತ್ರವನ್ನು ಬಿಡಿಸಿದ್ದಾರೆ. ಭಾನುವಾರ ಮುಂಜಾನೆ ಮೂರು ಗಂಟೆಗೆ ಚಿತ್ರ ಬಿಡಿಸಲು ಆರಂಭಿಸಿದ ಅವರು ಬೆಳಗ್ಗೆ 10 ಗಂಟೆಗೆ ಪೂರ್ಣಗೊಳಿಸಿದ್ದಾರೆ.

ಸತತ ಏಳು ಗಂಟೆಗಳ ಕಾಲ ಚಿತ್ರ ಬಿಡಿಸಿದ್ದಾರೆ. 135*60 ಅಡಿಯಲ್ಲಿ ಒಟ್ಟು 6100 ಚದರ ಅಡಿ ವ್ಯಾಪ್ತಿಯಲ್ಲಿ ಬಣ್ಣಬಣ್ಣದ ರಂಗೋಲಿ ಬಳಸಿ ಅಪ್ಪು ಅವರ ರಾಜಕುಮಾರ ಚಲನಚಿತ್ರದ ಪಾರಿವಾಳದೊಂದಿಗೆ ಇರುವ ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಆಕರ್ಷಕವಾಗಿ ಬಿಡಿಸಿದ್ದಾರೆ. ಸಾವಿರಾರು ಮಂದಿ ಜನರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net