

ಮೈಸೂರು: ನಟ ಪುನೀತ್ ರಾಜ್‌ಕುಮಾರ್‌ರಿಂದ ಪ್ರೇರಿತನಾಗಿ ನೇತ್ರದಾನ ಮಾಡುವ ನಿರ್ಧಾರ ಮಾಡಿದ್ದ ಪಾಂಡವಪುರ ತಾಲೂಕಿನ ಎಂ.ಸಿಂಗಾಪುರ ನಿವಾಸಿ ಸಚಿನ್ (22) ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಸಚಿನ್ ಅವರ ನೇತ್ರ ಹಾಗೂ ಅಂಗಾಂಗಳನ್ನು ಬುಧವಾರ ದಾನ ಮಾಡಲಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಎಂ.ಸಿಂಗಾಪುರ ನಿವಾಸಿ ಅನಂತರಾಮು-ಸಾಕಮ್ಮ ದಂಪತಿ ಪುತ್ರರಾದ ಸಚಿನ್ ನ.28 ರಂದು ಕೆ.ಆರ್.ಪೇಟೆ ತಾಲೂಕಿನ ಚಟ್ಟಂಗೆರೆ ಕಡೆಗೆ ತೆರಳುವ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಗುಡುಗನಹಳ್ಳಿ ಗೇಟ್ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟುಬಿತ್ತು. ತಕ್ಷಣ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕೆ.ಆರ್. ಆಸ್ಪತ್ರೆಗೆ ಕರೆ ತರಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಸಚಿನ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೆ ಅವರ ಮಿದುಳು ಸೋಮವಾರ ರಾತ್ರಿ ನಿಷ್ಕ್ರೀಯಗೊಂಡಿತು. ನಂತರ ಕುಟುಂಬ ವರ್ಗದವರಿಗೆ ಅಂಗಾಂಗ ದಾನದ ಕುರಿತು ವೈದ್ಯರು ತಿಳುವಳಿಕೆ ನೀಡಿದರು. ಅಲ್ಲದೆ, ಸಚಿನ್ ನೇತ್ರದಾನಕ್ಕೆ ಹಲವು ತಿಂಗಳ ಹಿಂದೆ ಸಹಿ ಮಾಡಿದ್ದರು. ಹೀಗಾಗಿ ಕುಟುಂಬ ವರ್ಗದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಸಚಿನ್ ದೇಹದಿಂದ ಎರಡು ನೇತ್ರ, ಹೃದಯ, ಕಿಡ್ನಿಯನ್ನು ಪಡೆಯಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ತಂಡೆಕೆರೆ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸಚಿನ್ ಲೇಬರ್ ಕಾಂಟ್ರಾೃಕ್ಟ್ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೈಗಾರಿಕಾ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಜನರಿಗೆ ಇವರು ಕೆಲಸ ಕೊಡಿಸಿದ್ದಾರೆ.