

ಯಶವಂತಪುರ : ಪುನೀತ್ ರಾಜಕುಮಾರ್ ಕೇವಲ ನಟರಾಗಿರಲಿಲ್ಲ ಬದಲಿಗೆ ಹಲವರಿಗೆ ಸ್ಪೂರ್ತಿಯಾಗಿದ್ದರು. ಹಾಗಾಗಿಯೇ ಇಡೀ ಕರ್ನಾಟಕದ ಜನತೆ ಅವರನ್ನು ಪ್ರೀತಿಯಿಂದ ಗೌರವಿಸುತ್ತಾರೆ ಎಂದು ಮಾಜಿ ಪಾಲಿಕೆ ಸದಸ್ಯ ಆಂಜಿನಪ್ಪ ಹೇಳಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿಯ ಡಾ.ರಾಜ್ ಕುಮಾರ್ ಸರ್ಕಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪುನೀತ್ ರಾಜ್‌ಕುಮಾರ್ 50ನೇ ಜನ್ಮದಿನಾಚರಣೆಯಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಮೂರೂವರೆ ವರ್ಷಗಳಾದರೂ ಅವರು ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗಿಲ್ಲ, ಪುನೀತ್ ರಾಜಕುಮಾರ್ ಹೆಸರನ್ನು ಹಲವು ಅಂಗಡಿಗಳಿಗೆ ಇಡಲಾಗಿದೆ. ಅವರ ಭಾವಚಿತ್ರಗಳು, ಪುತ್ಥಳಿಗಳು ಎಲ್ಲಾ ಕಡೆ ಕಾಣಸಿಗುತ್ತವೆ. ಸಾವಿರಾರು ಆಟೋಗಳ ಮೇಲೆ ಪುನೀತ್‌ರನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಅನಿಲ್ ಚಳಗೇರಿ, ಜೆ.ರಮೇಶ್, ನಾಗರಾಜ್, ಸಂತೋಷ್, ಸಿಎಂಸಿ ಸತ್ಯನಾರಾಯಣ, ಕೆ.ಆರ್.ಮೂರ್ತಿ, ಲಕ್ಷ್ಮೀ ಸುರೇಶ್, ತಾರಾ, ರೂಪಾ, ಮಹೇಶ್, ಪಾಂಡು, ನಾಗರಾಜ್ ಹಾಗೂ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.