ಅಪ್ಪು ಮೇಲಿನ ಅಭಿಮಾನ, ಅಪ್ಪ-ಮಗನ ಕೇಶಮುಂಡನ; ಸಾರ್ವಜನಿಕರಿಗೆ ಅನ್ನಸಂತರ್ಪಣೆ

Feature
Published on

ತುಮಕೂರು: ಪುನೀತ್‌ ರಾಜಕುಮಾರ್‌ ಅಗಲಿಕೆ ಬಳಿಕ ಅವರ ಅಭಿಮಾನಿಗಳು ನಾನಾ ರೀತಿಯಲ್ಲಿ ತಂತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಹಾಗೆ ಅಭಿಮಾನ ವ್ಯಕ್ತಪಡಿಸುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅಂಥದ್ದೇ ಒಂದು ಅಭಿಮಾನಕ್ಕೆ ಇದು ತಾಜಾ ಉದಾಹರಣೆ.

ಪುನೀತ್‌ ರಾಜಕುಮಾರ್‌ ಮೇಲಿನ ಅಭಿಮಾನದಿಂದ ಇಲ್ಲೊಬ್ಬ ಅಪ್ಪ-ಮಗ ಜೋಡಿ ಕೇಶಮುಂಡನವನ್ನೇ ಮಾಡಿಕೊಂಡಿದೆ. ಮಾತ್ರವಲ್ಲ, ಬಡಾವಣೆಯ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನೂ ನಡೆಸಿದೆ. ತುಮಕೂರು ಜಿಲ್ಲೆಯ ತಿಪಟೂರಿನ ವಿವೇಕಾನಂದನಗರದಲ್ಲಿ ಅಪ್ಪುಗಾಗಿ ಅಭಿಮಾನಿ ರವಿ ಎಂಬವರು ತಮ್ಮ ಪುತ್ರ ನಟರಾಜನ ಜೊತೆ ಕೇಶಮುಂಡನ ಮಾಡಿಸಿಕೊಂಡಿದ್ದಾರೆ.

ನಟ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಿಥಿ ಕಾರ್ಯ ನೆರವೇರಿಸಿದ ಬಳಿಕ ಅವರು ಕೇಶಮುಂಡನದ ಜತೆಗೆ ನೆರೆದಿದ್ದವರಿಗೆಲ್ಲ ಅನ್ನಸಂತರ್ಪಣೆಯನ್ನೂ ಮಾಡಿದ್ದಾರೆ. ಹನ್ನೊಂದನೇ ದಿನದ ತಿಥಿ ಕಾರ್ಯಕ್ಕೆ ನಾವು ಅಪ್ಪು ಸಮಾಧಿ ಬಳಿಗೆ ಹೋಗಬೇಕು. ಹೀಗಾಗಿ ಹೀಗಾಗಿ ಇಂದೇ ಕಾರ್ಯ ಮಾಡಿ ಕೇಶ ಮುಂಡನ ಮಾಡಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net