

ಮಂಡ್ಯ: ಪುನೀತ್ ರಾಜಕುಮಾರ್ ಅವರಂತಹ ಅಪರೂಪದ ವ್ಯಕ್ತಿಯ ನೆನಪು ಸದಾ ಜೀವಂತವಾಗಿರುತ್ತದೆ ಎಂದು ಸಮಾಜಸೇವಕ ಹಾಲಹಳ್ಳಿ ಆನಂದಪ್ಪ ಹೇಳಿದರು.
ನಗರದ ಹಾಲಹಳ್ಳಿಯ ವೃತ್ತದಲ್ಲಿ ಡಾ. ರಾಜ್ ವಂಶ ಬಳಗದಿಂದ ಆಯೋಜಿಸಿದ್ದ ಡಾ.ಪುನೀತ್ ರಾಜಕುಮಾರ್ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ 2ನೇ ವರ್ಷದ ಜನ್ಮದಿನ. ಅವರಿಲ್ಲ ಎನ್ನುವ ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ನಟನೆಯ ಜತೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದರು ಎಂದು ನುಡಿದರು.
ಯುವ ಮುಖಂಡ ಪೊಲೀಸ್ ಮಂಜಪ್ಪ, ಸಮಾಜ ಸೇವಕ ಶಂಕರ್, ಕೇಬಲ್ ಹರೀಶ್, ಪತ್ರಿಕೆಯ ವಿತರಕ ಸೋಮಶೇಖರ್, ಅಪ್ಪು ಅಭಿಮಾನಿಗಳು ಇದ್ದರು.