ಅಂಗವಿಕಲ ಬಾಲಕನ ಕೊನೆ ಆಸೆ ಈಡೇರಿಸಿದ ನಟ ಪುನೀತ್​ ರಾಜ್​ಕುಮಾರ್​

punith rajkumar feb 12 2020
Published on

ಬೆಂಗಳೂರು: ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಅಂಗವಿಕಲ ಬಾಲಕನನ್ನು ನಟ ಪುನೀತ್​ ರಾಜ್​ಕುಮಾರ್​ ತಮ್ಮ ನಿವಾಸಕ್ಕೆ ಕರೆಸಿಕೊಂಡು ಆತನ ಜತೆ ಅಲ್ಪ ಸಮಯ ಕಾಲ ಕಳೆದರು.

ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ಆದರ್ಶ. ಬೆಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ ಆಟೋ ಚಾಲಕ ಹನುಮಂತು ಹಾಗೂ ರೇಖಾ ಅವರ ಪುತ್ರ,. ದಂಪತಿಗೆ ಮೂವರು ಪುತ್ರರು. ಮೊದಲನೆ ಪುತ್ರ ಆದರ್ಶ. ಅವನಿಗೆ ಪುನೀತ್​ ಅಂದರೆ ಪಂಚ ಪ್ರಾಣ. ಮನೆ ತುಂಬಾ ಪುನೀತ್​ ರಾಜ್​ಕುಮಾರ್​ ಪೋಸ್ಟರ್​ಗಳನ್ನು ಅಂಟಿಸಿದ್ದಾನೆ. ಅವರ ಚಿತ್ರಗಳನ್ನು ವೀಕ್ಷಣೆ ಮಾಡುತ್ತಾನೆ.

ಸಾಯುವ ಮುನ್ನ ನಟ ಪುನೀತ್​ ನೋಡಬೇಕು ಎನ್ನುವ ಆಸೆ ಹೊಂದಿದ್ದ. ಇದನ್ನು ಅರಿತ ನಟ ಪುನೀತ್​ ಆತನನನ್ನು ತಮ್ಮ ಮನೆಗೆ ಕರೆಸಿಕೊಂಡು ಆತನ ಆಸೆಯನ್ನು ಈಡೇರಿಸಿದ್ದಾರೆ. ಅಲ್ಲದೆ ಆತನಿಗೆ ಸ್ಪರ್ಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ನಟ ಪುನೀತ್​ ಅವರ ಸಹಾಯದಿಂದ ಬಾಲಕನಲ್ಲಿ ಎಲ್ಲರಂತೆ ಓಡಾಡುವ ಆಸೆ ಚಿಗುರಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net